ಕೊರಗರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ ಸಿಓಡಿ ತನಿಖೆಗೆ : ಅರಗ ಜ್ಞಾನೇಂದ್ರ – Vishwanews24

Featured, ಉಡುಪಿ

ಕೊರಗರ ಮೇಲೆ ಪೊಲೀಸ್ ದೌರ್ಜನ್ಯ ಪ್ರಕರಣ ಸಿಓಡಿ ತನಿಖೆಗೆ : ಅರಗ ಜ್ಞಾನೇಂದ್ರ – Vishwanews24

ಕೋಟ : ಕೋಟ ಪೊಲೀಸರ ಅತಿರೇಕದ ವರ್ತನೆಗೆ ಇದೀಗ ಭಾರೀ ಬೆಲೆ ತೆರಬೇಕಾಗಿ ಬಂದಿದ್ದು, ಈ ಪ್ರಕರಣದ ಸಮಗ್ರ ತನಿಖೆಯನ್ನು ಸಿಓಡಿಗೆ ವಹಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಇಂದು ಹಲ್ಲೆಗೊಳಗಾದ ಕೊರಗರ ಕಾಲೋನಿ ಭೇಟಿ ನೀಡಿದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಮೆಹಂದಿ ಸಂದರ್ಭ ಪೊಲೀಸ್ ಇಲಾಖೆ ನಡೆದುಕೊಂಡ ರೀತಿಗೆ ನೋವಾಗಿದೆ. ಈ ಪ್ರಕರಣವನ್ನು ಸಿಓಡಿ ತಬಿಖೆಗೆ ವಹಿಸಲಾಗುತ್ತದೆ ಹಾಗೂ ಪೊಲೀಸರಿಂದ ಹಲ್ಲೆಗೊಳಗಾದವರಿಗೆ ಸರ್ಕಾರದ ವತಿಯಿಂದ ತಲಾ 2 ಲಕ್ಷ ರೂ. ನೀಡಲಾಗುವುದು ಎಂದರು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು. ಕೋಟತಟ್ಟು ಗ್ರಾಮದ ಕೊರಗ ಕಾಲೋನಿಯಲ್ಲಿ ಮೆಹಂದಿ ಸಂದರ್ಭ ಪೊಲೀಸರಿಂದ ಹಲ್ಲೆ ನಡೆದ ರಾಜೇಶ್ ಅವರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಧೈರ್ಯ ತುಂಬಿ ಮಾತನಾಡಿದರು.

ನಾನು ಕೂಡಾ ಕೊರಗ ಸಮುದಾಯದ ಜೊತೆ ಬೆಳೆದವ ಅಕ್ಕಿ ಗಿರಣಿಯಲ್ಲಿ ಕೊರಗ ಸಮುದಾಯದವರೊಂದಿಗೆ ಮೂಟೆ ಹೊರುತ್ತಿದ್ದೆ. ಅವರ ನೋವು ನಲಿವು ನನಗೆ ಗೊತ್ತಿದೆ. ತಳಸ್ತರದ ಮುಗ್ದ ಸಮುದಾಯ ಇಂತಹ ಕಾರ್ಯಕ್ರಮ ಮಾಡಿದ್ದೇ ಅಪರೂಪ. ಈ ಘಟನೆಯಿಂದ ಸಮುದಾಯಕ್ಕೆ ನೋವಾಗಿದೆ. ಕುಟುಂಬಕ್ಕೆ ಅಘಾತವಾಗಿದೆ. ಆ ದಿನ ಪೊಲೀಸರಿಂದ ಹಲ್ಲೆಗೊಳಗಾದವರಿಗೆ ಸರ್ಕಾರ ತಲಾ ಎರಡು ಲಕ್ಷ ನೀಡುತ್ತಿದ್ದು, ಇವತ್ತು 50ಸಾವಿರವನ್ನು ನೀಡಲಾಗುತ್ತದೆ ಎಂದರು

Leave a Reply