ಕೊರೋನಾ ವೈರಸ್ ಹರಡುವಿಕೆ ಹಿನ್ನಲೆ -ಕಾಪು ಸುಗ್ಗಿ ಮಾರಿಪೂಜೆ ಸಾರ್ವಜನಿಕರಿಗೆ ನಿರ್ಬಂಧ, ಹೊಸ ಮಾರಿಗುಡಿ ಸುತ್ತ ಬ್ಯಾರಿಗೇಟ್ ಅಳವಡಿಕೆ.

Featured, ಉಡುಪಿ

ಕೊರೋನಾ ವೈರಸ್ ಹರಡುವಿಕೆ ಹಿನ್ನಲೆ -ಕಾಪು ಸುಗ್ಗಿ ಮಾರಿಪೂಜೆ ಸಾರ್ವಜನಿಕರಿಗೆ ನಿರ್ಬಂಧ, ಹೊಸ ಮಾರಿಗುಡಿ ಸುತ್ತ ಬ್ಯಾರಿಗೇಟ್ ಅಳವಡಿಕೆ.

ಕಾಪು : ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನಲೆ ಮತ್ತು ಉಡುಪಿ ಜಿಲ್ಲಾಧಿಕಾರಿ ಮತ್ತು ಸರ್ಕಾರ ಹೊರಡಿಸಿರುವ ೧೪೪(೩) ಸೆಕ್ಷನ್ ಅನ್ವಯ ದಿನಾಂಕ ೨೪/೨೫ ರ ಮಂಗಳವಾರ ಮತ್ತು ಬುಧವಾರ ಜರಗಲಿದ್ದ ಇತಿಹಾಸ ಪ್ರಸಿದ್ಧ ಸುಗ್ಗಿ ಮಾರಿಪೂಜೆ ಜಾತ್ರೆ ರದ್ದುಪಡಿಸಿದ್ದು ಆ ದಿನಗಳಲ್ಲಿ ಸಾರ್ವಜನಿಕರು ಮಾರಿಗುಡಿ ಪ್ರವೇಶ ಮಾಡಬಾರದು ಎಂಬ ಉದ್ದೇಶದಿಂದ ಕಾಪು ಹೊಸಮಾರಿಗುಡಿ ಸುತ್ತಲೂ ಬ್ಯಾರಿಗೇಟ್ ಅಳವಡಿಸಲಾಗಿದೆ.

ಸುಮಾರು ಐವತ್ತಕ್ಕೂ ಹೆಚ್ಚು ಗೇಟ್ಗಳನ್ನು ದೇವಸ್ಥಾನ ಸುತ್ತಲೂ ಅಳವಡಿಸಿದ್ದು ಯಾವುದೇ ಕಾರಣಕ್ಕೂ ಭಕ್ತಾಧಿಗಳಿಗೆ ಮಾರಿಪೂಜೆಯ ದಿನದಂದು ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲ.