ಕೊಲಂಬೊ : 9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ – vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಕೊಲಂಬೊ : ಅಕ್ರಮ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಆರೋಪ : 9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

ಕೊಲಂಬೊ : ಶ್ರೀಲಂಕಾ ಜಲಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ 9 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ಬಂಧಿಸಿದೆ. ಅವರ ಟ್ರಾಲರ್ ದೋಣಿಯನ್ನೂ ವಶಕ್ಕೆ ಪಡೆದುಕೊಂಡಿದೆ.

ಮೀನುಗಾರರು ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ ದಾಟಿ ತಲೈಮನ್ನಾರ್ ಉತ್ತರ ಭಾಗದ ಶ್ರೀಲಂಕಾ ಜಲಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಈ ವೇಳೆ ಬುಧವಾರ ಸಂಜೆ ನಡೆಸಿದ ಕಾರ್ಯಾಚರಣೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಾಪಡೆ ಮಾಹಿತಿ ನೀಡಿದೆ.

ಸುಳ್ಯ: ಬೈಕ್-ಕಾರು ಅಪಘಾತ ; ದ್ವಿತೀಯ ಪಿಯು ವಿದ್ಯಾರ್ಥಿ ಸಾವು – vishwanews24

ಕಾರ್ಯಾಚರಣೆ ವೇಳೆ 50ಕ್ಕೂ ಹೆಚ್ಚು ಭಾರತೀಯ ಟ್ರಾಲರ್‌ಗಳು ಇರಾನತಿವು ದಕ್ಷಿಣ ಭಾಗದ ಶ್ರೀಲಂಕಾ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ನೌಕಾಪಡೆ ತಿಳಿಸಿದೆ.

ಬಂಧಿತ 9 ಮೀನುಗಾರರು ಹಾಗೂ ವಶಪಡಿಸಿಕೊಂಡ ಟ್ರಾಲರ್‌ನ್ನು ಮನ್ನಾರ್ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಮುಂದಿನ ಕಾನೂನು ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರ ಯಾರನ್ನೂ ಕಾಪಾಡಬಾರದು : ಡಿ ಕೆ ಶಿ ಆಗ್ರಹ – vishwanews24

Leave a Reply