ಕೋಟ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಎಸೆಸೆಲ್ಸಿ ವಿದ್ಯಾರ್ಥಿನಿ – Vishwanews24

ಉಡುಪಿ

ಕೋಟ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಎಸೆಸೆಲ್ಸಿ ವಿದ್ಯಾರ್ಥಿನಿ 

ಕೋಟ,: ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಎಸ್ಸೆಸೆಲ್ಸಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕೋಟ ಕೊರವಡಿಯಲ್ಲಿ ಆ 1ರ ಸೋಮವಾರ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಕೋಟ ಪಡುಕರೆ ಫ್ರೌಢಶಾಲೆಯ 10ತರಗತಿಯ ವಿದ್ಯಾರ್ಥಿ ಅನನ್ಯ (15) ಎಂದು ಗುರುತಿಸಲಾಗಿದೆ.

ವಿದ್ಯಾರ್ಥಿನಿ ಖಿನ್ನತೆಗೊಳಗಾಗಿದ್ದು ಶಾಲೆಗೆ ಹೊರಡುವ ಸಂದರ್ಭದಲ್ಲೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಒಂದು ದಿಕ್ಕಿನ ಕೋಣೆಗೆ ತೆರಳಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ. ಈ ವೇಳೆ ಪಕ್ಕದ ಮನೆಯವರು ಬೆಂಕಿಯನ್ನು ನೋಡಿ ಓಡೋಡಿ ಬಂದು ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಬಳಿಕ ಮಣಿಪಾಲದ ಖಾಸಗಿ ಆಸ್ಪತ್ರೆ ಕೊಂಡೊಯ್ದಿದ್ದರೂ ಪ್ರಯೋಜನವಾಗದೆ ಅಸುನೀಗಿದ್ದಾಳೆ.

ಬಾಲಕಿ ಮನೆಯಲ್ಲಿ ಅಜ್ಜಿ ಮತ್ತು ಆಕೆಯ ಚಿಕ್ಕಮ್ಮನ ಜೊತೆ ವಾಸ್ತವ್ಯವಾಗಿದ್ದು ಆಕೆಯ ತಂದೆ – ತಾಯಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಕುಂದಾಪುರ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುರತ್ಕಲ್ : NITK ಬೀಚ್‌ನಲ್ಲಿ ಯುವತಿಯ ಅತ್ಯಾಚಾರ – ವಿಡೀಯೋ ತೋರಿಸಿ ವಿದ್ಯಾರ್ಥಿನಿಗೆ  ಕಿರುಕುಳ ; ಆರೋಪಿ ಮುನಾಝ್ ಅಹ್ಮದ್ ಬಂಧನ  – Vishwanews24

Leave a Reply