ಕೋವಿಡ್ ಸಂಬಂಧಿತ ಕಾಂಗ್ರೆಸ್ ಅಪಪ್ರಚಾರಕ್ಕೆ ಬಿಜೆಪಿ `ಸೇವಾ ಹಿ ಸಂಘಟನ್’ ನಿಂದ ಸೂಕ್ತ ಉತ್ತರ: ಕುಯಿಲಾಡಿ ಸುರೇಶ್ ನಾಯಕ್- vishwanews24
ಕೋವಿಡ್ ಸಂಬಂಧಿತ ಕಾಂಗ್ರೆಸ್ ಅಪಪ್ರಚಾರಕ್ಕೆ ಬಿಜೆಪಿ `ಸೇವಾ ಹಿ ಸಂಘಟನ್’ ನಿಂದ ಸೂಕ್ತ ಉತ್ತರ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ : ಕೋವಿಡ್ 1 ಮತ್ತು 2 ರ ಅವಧಿಯಲ್ಲಿ ಲಸಿಕೆ ವಿತರಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲೆಯಲ್ಲಿ ಮಾಡಿರುವ ಕೆಲಸ ಕಾರ್ಯಗಳು” ಮಾತ್ರ ಮುಖ್ಯವೇ ಹೊರತು ಕಾಂಗ್ರೆಸ್ ನ ಅಪಪ್ರಚಾರವನ್ನು ನಾಗರೀಕರು ನಂಬುವುದಿಲ್ಲ. ಜಿಲ್ಲೆಯಲ್ಲಿ ವೈದ್ಯಕೀಯ ಪರಿಕರ ಹಂಚಿಕೆ, ದಿನಸಿ ಕಿಟ್ ಹಂಚಿಕೆ, ಕೋವಿಡ್ ಪೀಡಿತರ ಮನೆಗೆ ಹೋಗಿ ನೀಡಿರುವ ಸಾಂತ್ವಾನ, ಅವರಿಗೆ ನೀಡಿರುವ ಔಷದಿ ಕಿಟ್, ಪಲ್ಸ್ ಮೀಟರ್, ಮಾಸ್ಕ್ ಮತ್ತು ಲಸಿಕಾ ಕೇಂದ್ರದಲ್ಲಿ ಸ್ವಯಂ ಸೇವಕರಂತೆ ಕೆಲಸ ಮಾಡುವ ಪಕ್ಷದ ಕಾರ್ಯಕರ್ತರ ಕೆಲಸಗಳನ್ನು ಸಾರ್ವಜನಿಕರು ಮಾತನಾಡುತ್ತಾರೆ ವಿನಃ, ಏನೂ ಕೆಲಸ ಮಾಡದೆ ಬೀದಿಯಲ್ಲಿ ನಿಂತು ಕೆಲಸ ಮಾಡುವುದೇ ಕಾಂಗ್ರೆಸ್ ನ ಸಾಧನೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಲ್ಲಾ ವಿಷಯದಲ್ಲೂ ರಾಜಕೀಯ ಮಾಡುವ ಕಾಂಗ್ರೆಸ್ಸಿಗರು ಸ್ವಾತಂತ್ರ್ಯ ಪೂರ್ವದಿಂದ ಇಂದಿನವರೆಗೂ ದೇಶದ ಬಗ್ಗೆ ಪ್ರೀತಿ ಇಲ್ಲದೇ ಕೇವಲ ಕುಟುಂಬದ ಬಗ್ಗೆ ಪ್ರೀತಿಯಿಂದ ಕೆಲಸ ಮಾಡುವುದು ಮಾತ್ರ ಕಾಯಕಮಾಡಿಕೊಂಡಿದೆ. ನೈಜ ಕಾಳಜಿ ಇದ್ದರೆ ಕಾಂಗ್ರೆಸ್ ತಾವು ಕೋವಿಡ್ ಸಂಬಂಧಪಟ್ಟ ಪರಿಕರ ಹಾಗೂ ಕಿಟ್ ಗಳ ಬಗ್ಗೆ ಚರ್ಚೆಗೆ ಬರಲಿ ಜಿಲ್ಲೆಯಲ್ಲಿ ಅಕ್ಷರಶ 800 ಅಧಿಕ ಬಿಜೆಪಿ ಕಾರ್ಯಕರ್ತರು ಲಸಿಕಾ ಕೇಂದ್ರದಲ್ಲಿ, ಅಂತ್ಯ ಸಂಸ್ಕಾರದಲ್ಲಿ ಅಂಬುಲೆನ್ಸ್ ಗಳಲ್ಲಿ ಕೋವಿಟ್ ಪೀಡಿತರ ಮನೆ ಮನೆ ಬೇಟಿಯಲ್ಲಿ ತೊಡಗಿಸಿಕೊಂಡಿರುವಾಗ ಕೇವಲ ಆಪಾದನೆ ಮಾಡುವ ಕಾರ್ಯದಲ್ಲಿ ತೊಡಗಿರುವ ಕಾಂಗ್ರೆಸ್ ಗೆ ಜನ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಕುಯಿಲಾಡಿ ಹೇಳಿದ್ದಾರೆ.
