ಅಹಮದಾಬಾದ್: ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಹೊರಡಿಸಿರುವ ಮಹತ್ವದ ಆದೇಶದ ಮೇರೆಗೆ, ಪ್ರಮುಖ ಔಷಧ ಸಂಸ್ಥೆ ಟೊರೆಂಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ತನ್ನ ಪ್ರಮುಖ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ಶೇ.70ರವರೆಗೂ ಗಣನೀಯವಾಗಿ ಇಳಿಕೆ ಮಾಡಿದೆ.
ಈ ಪರಿಷ್ಕೃತ ನೂತನ ದರಗಳು ನವೆಂಬರ್ 9 ರಿಂದ ಜಾರಿಗೆ ಬರಲಿವೆ. ಈ ನಿಯಮ ಪಾಲನೆಯ ಭಾಗವಾಗಿ ಟೊರೆಂಟ್ ಫಾರ್ಮಾ ತನ್ನ ಉತ್ಪಾದನೆಯ ಜೀವರಕ್ಷಕ ಕ್ಯಾನ್ಸರ್ ಇಂಜೆಕ್ಷನ್‌ಗಳು, ಮಾತ್ರೆಗಳು ಹಾಗೂ ಕ್ಯಾಪ್ಸೂಲ್‌ಗಳ ದರವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿ ಪ್ರಕಟಣೆ ಹೊರಡಿಸಿದೆ.
ಕೇಂದ್ರ ಸರ್ಕಾರವು ಬೆಲೆ ನಿಯಂತ್ರಣಕ್ಕೆ ಒಳಪಡದ ಕ್ಯಾನ್ಸರ್ ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ) ಮೇಲಿನ ವ್ಯಾಪಾರ ಲಾಭಾಂಶದ ಮಿತಿಯನ್ನು ಶೇ. 30ಕ್ಕೆ ನಿಗದಿಪಡಿಸಿತ್ತು. ಹೀಗಾಗಿ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ 70% ರಷ್ಟು ಕಡಿಮೆಯಾಗಲಿದೆ.
ಈ ದರ ಕಡಿತದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಬೇಕು ಎಂದು ಎಲ್ಲಾ ಸಗಟು ವ್ಯಾಪಾರಿಗಳು, ಚಿಲ್ಲರೆ ಮಾರಾಟಗಾರರು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಟೊರೆಂಟ್ ಫಾರ್ಮಾ ಸಂಸ್ಥೆಯು ಸೂಚಿಸಿದೆ. ನವೆಂಬರ್ 9 ರಿಂದ ಜಾರಿಗೆ ಬರುವಂತೆ, ಔಷಧ ಪ್ಯಾಕ್ ಮೇಲೆ ಮುದ್ರಿಸಲಾದ ದರ ಅಥವಾ ಪರಿಷ್ಕೃತ ದರ-ಇವೆರಡರಲ್ಲಿ ಯಾವುದು ಕಡಿಮೆಯೋ ಅದೇ ದರ ನೀಡಿ ಗ್ರಾಹಕರು ಖರೀದಿ ಮಾಡಬೇಕಾಗುತ್ತದೆ.
ಬೆಳಗಾವಿ: ರಾಜಮನೆತನದ ಗೌರವ, ಸಂಪ್ರದಾಯಕ್ಕೆ ಚ್ಯುತಿ ತರುವ ಉದ್ದೇಶ ಸರ್ಕಾರಕ್ಕಿಲ್ಲ: ಡಿಕೆ ಶಿವಕುಮಾರ್ ಬೆಳಗಾವಿ: ರಾಜಮನೆತನಕ್ಕೆನೀಡಬೇಕಾದ ಗೌರವ ಹಾಗೂ ಸಾಂಪ್ರದಾಯಿಕ…
ಅ. 29 ರಂದು ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ…
ಸೌಜನ್ಯಾ ಪ್ರಕರಣ: ಹಿಂದಿನ ತನಿಖಾಧಿಕಾರಿಗಳಿಗೆ ಎಸ್ಐಟಿ ನೋಟಿಸ್ 15ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿಗೆ ವಿಚಾರಣೆಗೆ ಹಾಜರಾಗಲು ಸೂಚನೆ ಮಂಗಳೂರು: ಧರ್ಮಸ್ಥಳದ…
ಮಂಗಳೂರು : ಕಾನೂನುಬದ್ಧ ಮಾಂಸ ಸಾಗಾಟ ತಡೆದರೆ 10 ವರ್ಷ ಜೈಲು ಶಿಕ್ಷೆ : ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ…
ಮಂಗಳೂರು - ರಾಸ್ ಅಲ್ ಖೈಮಾ ನಡುವೆ ನೇರ ಸೇವೆ ಆರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು: ಕರಾವಳಿಯ ಅಂತಾರಾಷ್ಟ್ರೀಯ…
ಉಡುಪಿ :ಪ್ರಧಾನಿ ಮೋದಿಯವರ ತಂದೆಯ ಕುರಿತು ಖರ್ಗೆ ಹೇಳಿಕೆ ಕಾಂಗ್ರೆಸ್ ಹೀನ ಮನಸ್ಥಿತಿಗೆ ಕೈಗನ್ನಡಿ : ಯಶಪಾಲ್ ಸುವರ್ಣ ಆಕ್ರೋಶ…