ಕ್ಷೇತ್ರದಲ್ಲಿ ಪಾರ್ಲಿಮೆಂಟ್ ಸದಸ್ಯರ ಬಗ್ಗೆ ತೀವ್ರ ವಿರೋಧ ಬಂದ್ರೆ ಬಿಜೆಪಿಯಲ್ಲಿ ಬದಲಾವಣೆ ಫಿಕ್ಸ್ : vishwanews24
ಕ್ಷೇತ್ರದಲ್ಲಿ ಪಾರ್ಲಿಮೆಂಟ್ ಸದಸ್ಯರ ಬಗ್ಗೆ ತೀವ್ರ ವಿರೋಧ ಬಂದ್ರೆ ಬಿಜೆಪಿಯಲ್ಲಿ ಬದಲಾವಣೆ ಫಿಕ್ಸ್ : vishwanews24
ಆಪ್ತರ ಸಭೆಯಲ್ಲಿ ಬದಲಾವಣೆಯ ಗಾಳಿ ಬೀಸಿದರೆ ವಿಜಯೇಂದ್ರ…???
ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕರ್ನಾಟಕ ರಾಜ್ಯದಿಂದ 28 ಪಾರ್ಲಿಮೆಂಟ್ ಸದಸ್ಯರನ್ನು ಗೆಲ್ಲಿಸುವ ಮುಖೇನ ಪ್ರಧಾನಿ ಮೋದಿಯವರ ಕೈ ಬಲಪಡಿಸುವ ಉದ್ದೇಶ ಹೊಂದಿದೆ ಈ ಪೈಕಿ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ಲ್ಯಾನ್ ನೂತನ ರಾಜ್ಯಧ್ಯಕ್ಷ ವಿಕಯೇಂದ್ರ ಸೇರಿದಂತೆ ಕೇಂದ್ರ ನಾಯಕರ ಕೈ ಸೇರಿದೆ.
ಕಾಂಗ್ರೆಸ್ ನ ಪಂಚ ಭಾಗ್ಯಗಳ ನಡುವೆಯೂ ಹೊಸ ಪ್ಲ್ಯಾನ್ ಸಿದ್ದಪಡಿಸಿರುವ ರಾಜ್ಯ ಬಿಜೆಪಿ ದೇಶಕ್ಕಾಗಿ ಮೋದಿ ಅನ್ನುವ ಮಂತ್ರ ಜಪಿಸುತ್ತಿದ್ದು ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ ಕಸರತ್ತು ನಡೆಸುತ್ತಿದೆ.
ಯುವಕರು ಸೇರಿದಂತೆ ರಾಜ್ಯದಲ್ಲಿ 28 ಸದಸ್ಯರಲ್ಲಿ ಭಿನ್ನಮತ ಶಮನಗೊಳಿಸಿ 16ಕ್ಕೂ ಅಧಿಕ ಹೊಸ ಪಾರ್ಲಿಮೆಂಟ್ ಸದಸ್ಯರನ್ನು ರಾಜ್ಯದಿಂದ ಕೇಂದ್ರಕ್ಕೆ ಕಳುಹಿಸುವ ಮುಖೇನ ರಾಜ್ಯ ಸಾರಥಿ ವಿಜಯೇಂದ್ರ ಅವರ ಪ್ರಭಾವ ಹಾಗೂ ಶಕ್ತಿಯನ್ನು ತೋರಿಸುವ ಪ್ರಯತ್ನ ಇದಾಗಿದೆ ಎನ್ನಲಾಗಿದೆ.

ಈ ಪೈಕಿ ಈಗಾಗಲೆ ರಾಜ್ಯ ಹಾಗೂ ಕೇಂದ್ರದ ಚುನಾವಣಾ ಟೀಂ ಗ್ರೌಂಡ್ ಸರ್ವೆ ಸೇರಿದಂತೆ ಹೊಸ ಕಸರತ್ತಿನ ಮುಖೇನ ಅಭ್ಯರ್ಥಿ ಆಯ್ಕೆಯ ಹಿಂದೆ ಚಟುವಟಿಕೆ ಆರಂಭ ಮಾಡಿದ್ದು ಹಾಲಿ ಸಂಸದರ ವಿರುದ್ಧ ದೊಡ್ಡ ಮಟ್ಟದ ಅಸಮಾಧಾನದ ಬಿರುಗಾಳಿ ಎದ್ದರೆ ಮುಲಾಜಿಲ್ಲದೆ ಬದಲಾವಣೆ ಶತಸಿದ್ದ ಯಾವುದೇ ಕಾರಣಕ್ಕೂ ರಾಜೀ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಮಾತು ಕೋರ್ ಸದಸ್ಯರಿಂದ ಹೊರಬಿದ್ದಿದೆ.
NGO ಗಳ ಬೆನ್ನಿಗೆ ನಿಂತ ಸರ್ವೆ ತಂಡ
ಸದ್ಯ ಪೋನ್ ಕಾಲ್ – ವಾಟ್ಸಪ್- ಸೇರಿದಂತೆ ಗ್ರೌಂಡ್ ಸರ್ವೆ ನಡೆಸುತ್ತಿರುವ ಸರ್ವೆ ಏಜನ್ಸಿಗಳು ನೈಜತೆಮತ್ತುಸತ್ಯಾಂಶ ಆಧಾರಿತ ಗುಣಮಟ್ಟದ NGO ಗಳ ಸಹಕಾರದೊಂದಿಗೆ ಸರ್ವೆ ಕಾರ್ಯ ಆರಂಭ ಮಾಡಿದ್ದು ರಾಜ್ಯದ 224 ವಿಧಾನ ಸಭಾ ಕ್ಷೇತ್ರದಲ್ಲಿ ಚಟುವಟಿಕೆ ಮಾಡಲಿದೆ.
ಮೋದಿ ಸರ್ಕಾರದ ಸಾಧನೆ-ರಾಜ್ಯ ಸರ್ಕಾರದ ವೈಫಲ್ಯದ ಪಟ್ಟಿ
ಮೋದಿ ಸರ್ಕಾರ ದೇಶದಲ್ಲಿ ಮಾಡಿರುವ ಹೊಸ ಸಾಧನೆ ಹಾಗೂ ಕೆಲಸ ಕಾರ್ಯಗಳ ಪಟ್ಟಿಯನ್ನು ಮನೆಮನೆಗೆ ತಲುಪಿಸುವುದು ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯನ್ನು ಜನರಮನೆಬಾಗಿಲಿಗೆ ಮುಟ್ಟಿಸುವ ಕೆಲಸ ಕಾರ್ಯವನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲಾಗುತ್ತದೆ.
ಒಟ್ಟಾರೆಯಾಗಿ ಈ ಬಾರಿಯ ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ 28 ಸ್ಥಾನವನ್ನು ಮೋದಿ ಖಾತೆಗೆ ಸೇರ್ಪಡಿಸಲು ರಾಜ್ಯ ಬಿಜೆಪಿ ಶರವೇಗದ ಕಾರ್ಯ ಆರಂಭ ಮಾಡಿದೆ.
