ಗಂಗೊಳ್ಳಿಗೆ ಪ್ರಮೋದ್ ಮುತಾಲಿಕ್ ನಿರ್ಬಂಧ ಹೇರಿದ್ದರ ವಿರುದ್ಧ ನ್ಯಾಯಕ್ಕಾಗಿ ಕೊರಗಜ್ಜನ ಮೊರೆ ಹಿಂದೂ ಸಂಘಟನೆಯ ಕಾರ್ಯಕರ್ತರು – Vishwanews24
ಗಂಗೊಳ್ಳಿಗೆ ಪ್ರಮೋದ್ ಮುತಾಲಿಕ್ ನಿರ್ಬಂಧ ಹೇರಿದ್ದರ ವಿರುದ್ಧ ನ್ಯಾಯಕ್ಕಾಗಿ ಕೊರಗಜ್ಜನ ಮೊರೆ ಹಿಂದೂ ಸಂಘಟನೆಯ ಕಾರ್ಯಕರ್ತರು
ಕುಂದಾಪುರ: ಹಿಂದೂ ಜಾಗರಣ ವೇದಿಕೆ ವತಿಯಿಂದ ಗಂಗೊಳ್ಳಿಯಲ್ಲಿ ಇತ್ತೀಚೆಗೆ ನಡೆದಿದ್ದ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಭಾಗವಹಿಸಲು ನಿರ್ಬಂಧ ಹೇರಿದ್ದರ ವಿರುದ್ಧ ನ್ಯಾಯಕ್ಕಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಕೊರಗಜ್ಜನ ಮೊರೆಹೋಗಿದ್ದಾರೆ.
ಗಂಗೊಳ್ಳಿ ಜಾಗೃತ ಹಿಂದು ಕಾರ್ಯಕರ್ತರು ಇಂದು ಮುಂಜಾನೆ ಗಂಗೊಳ್ಳಿ ವೀರೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ 7 ಕಿ.ಮೀ ಪಾದಯಾತ್ರೆ ಮೂಲಕ ಸಾಗಿ ಮುಳ್ಳಿಕಟ್ಟೆ ಕೊರಗಜ್ಜನ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೀಗ ಕಾರ್ಯಕರ್ತರು ಪಾದಯಾತ್ರೆ ಮೂಲಕ ಕೊರಗಜ್ಜನ ಸನ್ನಿಧಿಗೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಗಂಗೊಳ್ಳಿಯ ವೀರೇಶ್ವರ ದೇವಸ್ಥಾನದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಭಾಗವಹಿಸಬೇಕಾಗಿತ್ತು. ಬಳಿಕ ಜಿಲ್ಲಾಡಳಿತದಿಂದ ಶಾಂತಿ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಅವರಿಗೆ ಉಡುಪಿ ಜಿಲ್ಲಾ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ನಂತರ ಈ ನಿಯಮ ಸಡಿಲಿಕೆ ಮಾಡಿ ಉಡುಪಿ ಪ್ರವೇಶಕ್ಕೆ ಅನುಮತಿ ನೀಡಲಾಯಿತಾದರೂ ಗಂಗೊಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಲಾಗಿತ್ತು.
ಹಿಜಾಬ್ ಧರಿಸಿದವರಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಅವಕಾಶವಿಲ್ಲ; ಬಿ.ಸಿ ನಾಗೇಶ್ – Vishwanews24
