ಗೀಸರ್‌ ಗ್ಯಾಸ್ ಸೋರಿಕೆ: ಉಸಿರುಗಟ್ಟಿ ದಂಪತಿ ಮೃತ್ಯು – ಮಗು ಆಸ್ಪತ್ರೆಗೆ ದಾಖಲು – Vishwanews24

Featured, ರಾಷ್ಟ್ರ ನ್ಯೂಸ್

ಗೀಸರ್‌ ಗ್ಯಾಸ್ ಸೋರಿಕೆ: ಉಸಿರುಗಟ್ಟಿ ದಂಪತಿ ಮೃತ್ಯು – ಮಗು ಆಸ್ಪತ್ರೆಗೆ ದಾಖಲು

ಜೈಪುರ: ಬಾತ್‌ ರೂಮ್‌ ನಲ್ಲಿ ಸ್ನಾನ ಮಾಡುವಾಗ ಉಸಿರುಗಟ್ಟಿ ದಂಪತಿಗಳಿಬ್ಬರು ಮೃತಪಟ್ಟು, 5 ವರ್ಷದ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ದಾರುಣ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ.

ಶಹಾಪುರ ನಿವಾಸಿಗಳಾದ ಶಿವನಾರಾಯಣ ಜಾನ್ವಾರ್ (37), ಅವರ ಪತ್ನಿ ಕವಿತಾ ಜಾನ್ವರ್ (35) ಮೃತ ದಂಪತಿಗಳು.

ಮಗ ವಿಹಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಾಜ್ಯ ಸಾರಿಗೆ ನೌಕರರಿಗೆ ಸಿಎಂ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ :  ಶೇ.15 ರಷ್ಟು ವೇತನ ಹೆಚ್ಚಳ ಮಾಡಿ ಇಂದೇ ಅಧಿಕೃತ ಆದೇಶ – Vishwanews24

ದಂಪತಿಗಳು ಹಾಗೂ ಕುಟುಂಬ ಸದಸ್ಯರು ಶೀತಲ ಅಷ್ಟಮಿ ಹಬ್ಬದ ಪ್ರಯುಕ್ತ ಬಣ್ಣದಲ್ಲಿ ಆಡಿದ್ದರು. ಆದಾದ ಬಳಿಕ ಬಣ್ಣವನ್ನು ತೊಳೆಯಲು ತಮ್ಮ 5 ವರ್ಷದ ಮಗನನ್ನು ಕರೆದುಕೊಂಡು ದಂಪತಿಗಳು ಬಾತ್‌ ರೂಮ್‌ ಗೆ ತೆರಳಿದ್ದಾರೆ. ಈ ವೇಳೆ ಗೀಸರ್‌ ಆನ್‌ ಮಾಡಿದ್ದಾರೆ. ಕೆಲವೇ ಕ್ಷಣದಲ್ಲಿ ಗೀಸರ್‌ ಅನಿಲ ಸೋರಿಕೆಯಾಗಿದೆ. ಏಕಾಏಕಿ ಗೀಸರ್‌ ಗ್ಯಾಸ್‌ ಲೀಕ್‌ ಆದ ಪರಿಣಾಮ ದಂಪತಿಗಳಿಗೆ ಉಸಿರುಗಟ್ಟಿ ಏನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದಾದ ಕೆಲ ಸಮಯದ ಬಳಿಕ ಕುಟುಂಬದ ಇತರ ಸದಸ್ಯರು ಬಾಗಿಲು ಬಡಿದು ಕರೆಯಲು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಬಾಗಿಲು ಒಡೆದು ನೋಡಿದ್ದಾರೆ. ನೋಡುವಾಗ ಮೂವರು ಪ್ರಜ್ಞೆ ತಪ್ಪಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೂವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದರಲ್ಲಿ ದಂಪತಿಗಳು ಮೃತಪಟ್ಟಿದ್ದು,ಮಗ ವಿಹಾನ್‌ ಬದುಕುಳಿದಿದ್ದಾರೆ ಎಂದು ಘಟನೆ ಬಗ್ಗೆ ಪೊಲೀಸರು ಹೇಳಿದ್ದಾರೆ.

ಉಡುಪಿ: ಅಕ್ರಮ ಸಾಗಾಟದ ವೇಳೆ ವಶಪಡಿಸಿಕೊಂಡಿರುವ ಅಕ್ಕಿ ಎಪಿಎಲ್‌ ಕಾರ್ಡ್‌ದಾರರಿಗೆ ವಿತರಣೆ – Vishwanews24

 

Leave a Reply