ಗೃಹಜ್ಯೋತಿ – ಆಗಸ್ಟ್‌ನಿಂದ ಶೂನ್ಯ ಬಿಲ್‌: ಕೆಜೆ ಜಾರ್ಜ್‌ – Vishwanews24

Featured, ರಾಜ್ಯ ನ್ಯೂಸ್

ಗೃಹಜ್ಯೋತಿ – ಆಗಸ್ಟ್‌ನಿಂದ ಶೂನ್ಯ ಬಿಲ್‌: ಕೆಜೆ ಜಾರ್ಜ್‌

ಬಳ್ಳಾರಿ: ವಿದ್ಯುತ್‌ ಬಳಕೆಯ ವಾರ್ಷಿಕ ಸರಾಸರಿಗೆ ಶೇ.೧೦ರಷ್ಟು ಸೇರಿಸಿ ಮುಂದಿನ ಆಗಸ್ಟ್‌ ತಿಂಗಳಿನಿಂದ ಶೂನ್ಯ ಬಿಲ್‌ ನೀಡಲಾಗುವುದು ಎಂದು ಸಚಿವ ಕೆಜೆ ಜಾರ್ಜ್‌ ಹೇಳಿದ್ದಾರೆ.

ಬಳ್ಳಾರಿಯಲ್ಲಿ ಮಾತನಾಡಿ, ಜುಲೈ ನಂತರ ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ರಾಜ್ಯದಲ್ಲಿ 2 ಕೋಟಿ 14 ಲಕ್ಷ ಕುಟುಂಬಕ್ಕೆ ಗೃಹಜ್ಯೋತಿ ಯೋಜನೆ ಫಲಾನುಭವಿಗಳಿದ್ದಾರೆ. ನಾವು ನೀಡಿದ ಆಶ್ವಾಸನೆಯಂತೆ ಜನರಿಗೆ ಉಚಿತ ವಿದ್ಯುತ್ ನೀಡುತ್ತೇವೆ. 200 ಯೂನಿಟ್​ಗಿಂತ ಹೆಚ್ಚು ವಿದ್ಯುತ್​ ಬಳಸಿದ್ರೆ ಅದಕ್ಕೆ ಬಿಲ್​ ಪಾವತಿಸಬೇಕಾಗುತ್ತೆ. ೧೦೦ ಯೂನಿಟ್‌ವರೆಗೆ ಒಂದು ಸ್ಲ್ಯಾಬ್‌ ಹಾಗೂ ೧೦೦ ಯೂನಿಟ್‌ ಮೇಲೆ ಇನ್ನೊಂದು ಸ್ಲ್ಯಾಬ್‌ ಇದೆ. ಇನ್ನು ಕೈಗಾರಿಕೆಗಳಿಗೆ ವಿಧಿಸಲಾಗಿರುವ ಬಿಲ್‌ಗಳನ್ನು ಮರು ಪರಿಶೀಲಿಸಲಾಗುವುದು ಎಂದಿದ್ದಾರೆ.

ಕುಂದಾಪುರ: ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು – Vishwanews24

ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ, ಈ ಹಿಂದೆ ಇದ್ದ ಬಿಜೆಪಿ ಸರ್ಕಾರ. ಆದ್ರೆ ಅದನ್ನು ನಮ್ಮ ಮೇಲೆ ಹಾಕಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಬಿಲ್ ಜಾಸ್ತಿ ಮಾಡಲಿಲ್ಲ. ಅದನ್ನ ಈಗ ಹೆಚ್ಚಿಸಿದ್ದಾರೆ.

Leave a Reply