ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ – vishwanews24

Featured, ರಾಜ್ಯ ನ್ಯೂಸ್

ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ

ಬೆಂಗಳೂರು: ಗೃಹಲಕ್ಷ್ಮಿ, ಗೃಹಜ್ಯೋತಿ ಯೊಜನೆಗಳಲ್ಲಿ ನಕಲಿ ಫಲಾನುಭವಿಗಳನ್ನ ಪತ್ತೆ ಹಚ್ಚುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಫಲಾನುಭವಿಗಳು ಸೌಲಭ್ಯ ಪಡೆಯಬೇಕಾದ್ರೆ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.

ಗೃಹಲಕ್ಷ್ಮಿ ಯೋಜನೆಯಲ್ಲಿ 1.28 ಕೋಟಿ ಫಲಾನುಭವಿಗಳು ಇದ್ದಾರೆ. ಅದರಲ್ಲಿ 4.30 ಲಕ್ಷ ಫಲಾನುಭವಿಗಳು ತೆರಿಗೆ ಪಾವತಿದಾರರಿದ್ದಾರೆ. ಮೃತಪಟ್ಟವರ ಖಾತೆಗೂ ಹಣ ಸಂದಾಯವಾಗುತ್ತಿದೆ. ಸುಮಾರು 100 ಕೋಟಿ ರೂ. ಹಣ ಸತ್ತವರ ಖಾತೆಗೆ ಹೋಗಿದೆ. ಮತ್ತೆ ಬೇರೆ ನಂಬರ್ ಗಳನ್ನ ಸೇರಿಸಿ ಹಣ ಪಡೆಯುತ್ತಾ ಇದ್ದಾರೆ. ಯಾರು ಏನು ಅಂತಾ ಗೊತ್ತಿಲ್ಲ. ಹಾಗಾಗಿ ಹೊಸ ಅರ್ಜಿ ಸಲ್ಲಿಕೆ ಮಾಡಬೇಕು ಎಂದು ಸಿಎಂ ಡಿಕೆ ಶಿವಕುಮಾರ್ ಆದೇಶಿಸಿದ್ದಾರೆ.

ಮನೆ, ಅಂಗಡಿ ಮೇಲೆ ಕೆಳಗೆ ಇರುತ್ತೆ. ಅಂಗಡಿಗೆ ಬೇಕಾದ್ರೆ ಅವರು ಮೀಟರ್ ಬೇರೆ ಹಾಕಿಸಲಿ. ನಾವು ವಾಸಕ್ಕೆ ಮಾತ್ರ ಗೃಹಜ್ಯೋತಿ ಕೊಡುತ್ತಿದ್ದೇವೆ. ಅವರ ಬ್ಯುಸಿನೆಸ್‌ಗೆಲ್ಲಾ ನಾವು ಕೊಡೋದಕ್ಕೆ ಆಗಲ್ಲ. ಜೊತೆಗೆ ಹೊಸ ಅರ್ಜಿ ಸಲ್ಲಿಕೆ ಮಾಡಿದವರಿಗೆ ಗ್ಯಾರಂಟಿ ಕಾರ್ಡ್ ಕೊಡ್ತೇವೆ ಎಂದು ಅವರು ತಿಳಿಸಿದ್ದಾರೆ.

ಇನ್ನೂ 1.68 ಕೋಟಿಗೂ ಹೆಚ್ಚು ಗೃಹಜ್ಯೋತಿ ಫಲಾನುಭವಿಗಳು ಇದ್ದಾರೆ. ಅವರು ಕೂಡ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಲ್ಲೂ ಒಬ್ಬರು ಐದಾರೂ ಮೀಟರ್ ಪಡೆದಿದ್ದಾರೆ. ಅವರು ಅಲ್ಲೇ ವಾಸ ಮಾಡ್ತಾ ಇದ್ದಾರಾ? ಅಥವಾ ಆ ನಿವಾಸದಲ್ಲಿ ಬೇರೆ ರಾಜ್ಯದವರು ವಾಸ ಮಾಡ್ತಾ ಇದ್ದಾರಾ? ಕರ್ನಾಟಕದವರು ಅಲ್ವೋ ಅಂತಾ ಪತ್ತೆ ಹಚ್ಚಬೇಕಾಗಿದೆ ಎಂದಿದ್ದಾರೆ.

ಕುಟುಂಬದ ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಅವರು ಗೃಹಲಕ್ಷ್ಮಿ ಯೋಜನೆಗೆ ಅನರ್ಹರಾಗುತ್ತಾರೆ. ಜೊತೆಗೆ, ಯಜಮಾನಿ ಅಥವಾ ಅವರ ಪತಿ ಜಿಎಸ್‌ಟಿ ಪಾವತಿದಾರರಾಗಿದ್ದರೂ ಈ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಿಲ್ಲ.

Leave a Reply