ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ 3 ಪಕ್ಷೇತರರ ಬೆಂಬಲ – Vishwanews24
ಗೋವಾದಲ್ಲಿ ಸರ್ಕಾರ ರಚಿಸಲು ಬಿಜೆಪಿಗೆ 3 ಪಕ್ಷೇತರರ ಬೆಂಬಲ – Vishwanews24
ಪಣಜಿ: ಗೋವಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 19 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 21 ಸದಸ್ಯರ ಅಗತ್ಯವಿದೆ.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 21 ಮತಗಳು ಅಗತ್ಯ. ಸದ್ಯ ಬಿಜೆಪಿ 19ರಲ್ಲಿ ಸ್ಥಿರವಾಗಿದ್ದು, ಬಹುಮತಕ್ಕೆ ಎರಡರಿಂದ ಮೂವರು ಶಾಸಕರ ಕೊರತೆಯುಂಟಾಗಿದೆ. ಪರಿಸ್ಥಿತಿ ಹೀಗಿರುವಾಗಲೇ, ಮೂವರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದು, ಸರ್ಕಾರ ರಚಿಸಲು ಬಿಜೆಪಿ ಹಾದಿ ಸುಗಮವಾದಂತಾಗಿದೆ.
ಬಿಜೆಪಿ 18, ಕಾಂಗ್ರೆಸ್ 11, ಎಎಪಿ 2, ಎಂಜಿಪಿ ಮೈತ್ರಿಕೂಟ 4, ಇತರರು 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಸರ್ಕಾರ ರಚನೆಗೆ ಬಿಜೆಪಿಗೆ ಮೂವರು ಸದಸ್ಯರ ಕೊರತೆಯಿದ್ದು, ಪಕ್ಷೇತರರು ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾದ ಕಾರ್ಟಲಿಮ್ ಕ್ಷೇತ್ರದ ಮ್ಯಾನುಯೆಲ್ ವಾಜ್ , ಕರ್ಟೋರಿಮ್ ಕ್ಷೇತ್ರದ ಅಲೆಕ್ಸಿಯೊ ರೆಗಿನಾಲ್ಡೊ ಮತ್ತು ಬಿಚೊಲಿಮ್ ವಿಧಾನಸಭಾ ಕ್ಷೇತ್ರದ ಡಾ. ಚಂದ್ರಕಾಂತ್ ಶೆಟ್ಟಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಉಡುಪಿ: ಪಂಚರಾಜ್ಯ ಚುನಾವಣೆ ಬಿಜೆಪಿ ಜಯಭೇರಿ : ಉಡುಪಿ ಜಿಲ್ಲಾ ಬಿಜೆಪಿಯಿಂದ ವಿಜಯೋತ್ಸವ – Vishwanews24
