ಗೋ ಕಳ್ಳತನ , ಅಕ್ರಮ ಕಸಾಯಿಖಾನೆ , ಅಕ್ರಮ ಗೋ ಸಾಗಾಟ ಮಾಡುವ ಆರೋಪಿಗಳ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಕಾಯಿದೆ : ಡಾ.ಭರತ್ ಶೆಟ್ಟಿ ಆದೇಶ – Vishwanews24

Featured, ದಕ್ಷಿಣ ಕನ್ನಡ

ಗೋ ಕಳ್ಳತನ , ಅಕ್ರಮ ಕಸಾಯಿಖಾನೆ , ಅಕ್ರಮ ಗೋ ಸಾಗಾಟ ಮಾಡುವ ಆರೋಪಿಗಳ ಆಸ್ತಿ ಮುಟ್ಟುಗೋಲು ದಂಡನಾಸ್ತ್ರ ಕಾಯಿದೆ : ಡಾ.ಭರತ್ ಶೆಟ್ಟಿ ಆದೇಶ

ಮಂಗಳೂರು: ರಾಜ್ಯದಲ್ಲಿ ಗೋ ಕಳ್ಳತನ ,ಅಕ್ರಮ ಕಸಾಯಿಖಾನೆ ನಡೆಸುವುದು, ಅಕ್ರಮ ಗೋ ಸಾಗಾಟ ಮಾಡುವ ಆರೋಪಿಗಳ ಆಸ್ತಿ ಮುಟ್ಟು ಗೋಲು ದಂಡನಾಸ್ತ್ರ ಕಾಯಿದೆಯನ್ನು ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಆದೇಶಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಅಕ್ರಮವಾಗಿ ಗೋ ಹತ್ಯೆ,ಕಳ್ಳತನ ಅಪರಾಧ ಪ್ರಕರಣ ಮಟ್ಟ ಹಾಕಲು ಈ ಕಠಿಣ ಅಸ್ತ್ರಗಳ ಬಳಕೆ ಮಾಡುತ್ತೇವೆ. ಪೊಲೀಸರು ಪ್ರಕರಣ ದಾಖಲಿಸಿದ ಕೂಡಲೇ ಕಂದಾಯ ಇಲಾಖೆ ತಕ್ಷಣ ಆರೋಪಿಗಳ ಆಸ್ತಿ ಮುಟ್ಟುಗೋಲಿಗೆ ಬೇಕಾದ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಇನ್ನು ಹೈನುಗಾರಿಕೆ ನಡೆಸಿ ಜೀವನ ನಡೆಸುವವರ ಹಟ್ಟಿಯಿಂದ ದನ ಕದಿಯುದನ್ನು, ಬೀಡಾಡಿ ದನಗಳ ಕದ್ದು ಹತ್ಯೆ ಮಾಡುವುದು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದರು.

ಗೋ ಕಳ್ಳತನ ,ಅಕ್ರಮ ಕಸಾಯಿಖಾನೆ ನಡೆಸುವ ಆರೋಪ ರುಜುವಾತಾದರೆ ಅಂತಹವ ಆಸ್ತಿ ಮುಟ್ಟುಗೋಲು ದಂಡಾಸ್ತ್ರ ಪ್ರಯೋಗಿಸುವಂತೆ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾ.ಹೆದ್ದಾರಿಯ ತೇಪೆ ಕಾಮಗಾರಿ ಮುಗಿಸದಿದ್ದಲ್ಲಿ ಟೋಲ್ ಸಂಗ್ರಹ ಮಾಡಲು ಬಿಡುವುದಿಲ್ಲ: ನವಯುಗ ಕಂಪನಿಗೆ ಶಾಸಕ ರಘುಪತಿ ಭಟ್ ಎಚ್ಚರಿಕೆ – Vishwanews24

Leave a Reply