ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹ 20ರವರೆಗೆ ಕಡಿತ – vishwanews24
ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹20ರವರೆಗೆ ಕಡಿತ
ಬೆಂಗಳೂರು: ಮಾರುಕಟ್ಟೆಯಲ್ಲಿ ಹೊಸ ಸೋನಾ ಮಸೂರಿ ಅಕ್ಕಿಯ ದರದಲ್ಲಿ ಭಾರೀ ಇಳಿಕೆ ಕಂಡಿದೆ. ಈ ಹಿಂದೆ ಕೆಜಿಗೆ 80 ರೂ. ರಿಂದ 90 ರೂ.ರ ವರೆಗೆ ಮಾರಾಟವಾಗುತ್ತಿದ್ದ ಅಕ್ಕಿ ದರ ಇದೀಗ 65 ರೂ. ರಿಂದ 70 ರೂ.ಕ್ಕೆ ಇಳಿಕೆಯಾಗಿದೆ. ಪ್ರತಿ ಕೆಜಿಗೆ ಸುಮಾರು 10 ರೂ. ರಿಂದ 20 ರೂ. ರವರೆಗೆ ದರ ಕಡಿಮೆಯಾಗಿದೆ.
ಭತ್ತದ ಪೂರೈಕೆ ಕುಸಿದಿದ್ದರಿಂದ ಕಳೆದ ಕೆಲವು ದಿನಗಳಿಂದ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ, ಇದೀಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದೆ. ಭತ್ತದ ಕಟಾವು ಪೂರ್ಣಗೊಂಡು ಮಿಲ್ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ದರ ಕೊಂಚ ಇಳಿಕೆಯಾಗಿದೆ.
ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು -vishwanews24
ಅಕ್ಕಿ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಕ್ವಿಂಟಲ್ಗೆ ಸುಮಾರು 8,500 ರೂ. ಇದ್ದ ದರ, ಇದೀಗ 6,500ರೂ. ಕ್ಕೆ ಇಳಿಕೆಯಾಗಿದೆ. ಈ ಮೂಲಕ ಕ್ವಿಂಟಲ್ ಅಕ್ಕಿಗೆ ಬರೋಬ್ಬರಿ 2,000 ಇಳಿಕೆ ಕಂಡಿದೆ.
