ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಜಾಹೀರಾತು ಫಲಕ : ತಾಯಿ ಮತ್ತು ಮಗಳು ಮೃತ್ಯು – Vishwanews24

Featured, ರಾಷ್ಟ್ರ ನ್ಯೂಸ್

ಲಕ್ನೋ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಬೃಹತ್ ಜಾಹೀರಾತು ಫಲಕ : ತಾಯಿ ಮತ್ತು ಮಗಳು ಮೃತ್ಯು

ಲಕ್ನೋ : ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಜಾಹೀರಾತು ಫಲಕ ಬಿದ್ದು ತಾಯಿ ಮತ್ತು ಮಗಳು ಸಾವಿಗೀಡಾದ ದಾರುಣ ಘಟನೆ ಉತ್ತರಪ್ರದೇಶದ ಲಕ್ನೋದ ಇಕಾನಾ ಸ್ಟೇಡಿಯಂ ಬಳಿ ನಡೆದಿದೆ.

ಪ್ರೀತಿ ಜಗ್ಗಿ(38) ಮತ್ತು ಏಂಜಲ್(15) ಮೃತ ದುರ್ದೈವಿಗಳಾಗಿದ್ದು, ಕಾರಿನ ಡ್ರೈವರ್​ ಸರ್ತಾಜ್ (28) ಭೀಕರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತಾಯಿ ಹಾಗೂ ಮಗಳು ಮಾಲ್‌ಗೆ ಹೋಗುತ್ತಿದ್ದಾಗ ಏಕಾನಾ ಸ್ಟೇಡಿಯಂ ಹತ್ತಿರದ ಗೇಟ್ ನಂಬರ್ ಎರಡರ ಮುಂಭಾಗದಲ್ಲಿದ್ದ ಜಾಹೀರಾತು ಫಲಕ ಏಕಾಏಕಿ ಮಹೇಂದ್ರಾ ಎಸ್​​ಯುವಿ ಮೇಲೆ ಬಿದ್ದು ಘಟನೆ ಸಂಭವಿಸಿದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ಕಮೀಷನರ್ ಅಮಿತ್ ಕುಮಾವತ್ ತಿಳಿಸಿದ್ದಾರೆ.

ಉಡುಪಿ : ವಿದ್ಯಾರ್ಥಿಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಬಸ್‌ ಸಂಪರ್ಕ ಕಲ್ಪಿಸಿ : ಶಾಸಕ ಯಶಪಾಲ್ ಸುವರ್ಣ – Vishwanews24

Leave a Reply