ಚಲಿಸುತ್ತಿದ್ದ ರೈಲಿನ ಕಿಟಕಿ ಮೂಲಕ ತೂರಿ ಬಂದ ಕಬ್ಬಿಣದ ರಾಡ್, ಪ್ರಯಾಣಿಕ ಸಾವು – Vishwanews24
ಚಲಿಸುತ್ತಿದ್ದ ರೈಲಿನ ಕಿಟಕಿ ಮೂಲಕ ತೂರಿ ಬಂದ ಕಬ್ಬಿಣದ ರಾಡ್, ಪ್ರಯಾಣಿಕ ಸಾವು
ನವದೆಹಲಿ: ಸುಮ್ಮನೆ ಕುಳಿತಿದ್ದರು ಸಹ ಸಾವು ನಮ್ಮ ಪಕ್ಕದಲ್ಲೇ ಇರುತ್ತದೆ ಎಂಬುದಕ್ಕೆ ಈ ಭಯಾನಕ ಘಟನೆ ತಾಜಾ ಉದಾಹರಣೆಯಾಗಿದೆ.
ಪ್ರಯಾಣಿಕನೊಬ್ಬ ರೈಲಿನ ಕಿಟಕಿ ಪಕ್ಕದ ಸೀಟಿನಲ್ಲಿ ಆರಾಮಾಗಿ ಕುಳಿತು ಪ್ರಯಾಣಿಸುತ್ತಿದ್ದಾಗ ಕಿಟಕಿಯಿಂದ ತೂರಿ ಬಂದ ಕಬ್ಬಿಣ ಸಲಾಕೆಯೊಂದು ಪ್ರಯಾಣಿಕನ ಕುತ್ತಿಗೆಯನ್ನು ಇರಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ನವ ಮಂಗಳೂರು ಬಂದರಿಗೆ ಆಗಮಿಸಿದ 2 ನೇ ಬೃಹತ್ ಹಡಗು ‘ಸೆವೆನ್ ಸೀಸ್ ಎಕ್ಸ್‌ಪ್ಲೋರರ್ – Vishwanews24
ಮೃತ ವ್ಯಕ್ತಿಯನ್ನು ಹರಿಕೇಶ್ ಕುಮಾರ್ ದುಬೆ ಎಂದು ಗುರುತಿಸಲಾಗಿದೆ. ಈತ ನಿನ್ನೆ (ಡಿ.02) ದೆಹಲಿಯಿಂದ ಉತ್ತರ ಪ್ರದೇಶದ ಕಾನ್ಪುರ್ಗೆ ತೆರಳುತ್ತಿದ್ದ ನಿಲಾಂಚಲ್ ಎಕ್ಸ್ಪ್ರೆಸ್ ರೈಲನ್ನು ಏರಿದ್ದ. ರೈಲು ಬಿಹಾರದ ದನ್ವಾರ್ ಮತ್ತು ಉತ್ತರ ಪ್ರದೇಶದ ಸೊಮ್ನಾ ನಡುವೆ ಇದ್ದಾಗ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ರೈಲ್ವೆ ಹಳಿಗಾಗಿ ಬಳಸುತ್ತಿದ್ದ ಕಬ್ಬಿಣದ ಸಲಾಕೆ ಕಿಟಕಿಯಿಂದ ತೂರಿ ಬಂದು ದುಬೆ ಕುತ್ತಿಗೆಯನ್ನು ನುಸುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಘಟನೆ ಬೆನ್ನಲ್ಲೇ ರೈಲನ್ನು ಆಲಿಗಢ ಜಂಕ್ಷನ್ನಲ್ಲಿ ನಿಲ್ಲಿಸಲಾಯಿತು. ಬಳಿಕ ಆತನ ಮೃತದೇಹವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರ ಮಾಡಿ ಮಾಹಿತಿ ನೀಡಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವುದಾಗಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
