ಚಿಕ್ಕಮಗಳೂರು: ಈ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಗೆಲ್ಲಿಸಬೇಕು : ಶೋಭಾ ಕರಂದ್ಲಾಜೆ – Vishwanews24

Featured, ರಾಜ್ಯ ನ್ಯೂಸ್

ಪ್ರಧಾನಿಯವರಿಗೆ ಮತ್ತಷ್ಟು ಬಲ ತುಂಬಲು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿಮ್ಮ ಆಯ್ಕೆಯಾಗಬೇಕು : ಶೋಭಾ ಕರಂದ್ಲಾಜೆ 

ಚಿಕ್ಕಮಗಳೂರು: ಈ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಗೆಲ್ಲಿಸಬೇಕು ಎಂದು ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಕೋವಿಡ್‌ ವ್ಯಾಕ್ಸಿನ್‌ ತಯಾರಿಸಿ ಅದನ್ನು ಇತರೆ ದೇಶಗಳಿಗೂ ನೀಡಿ ಭಾರತಿಯರಿಗೆ ಉಚಿತವಾಗಿ ನೀಡುವುದು ಸುಲಭದ ಮಾತಲ್ಲ.

ಸರ್ವರನ್ನೂ ಗಮನದಲ್ಲಿರಿಸಿ ಯೋಜನೆ ರೂಪಿಸಲು ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಿಂದ ಮಾತ್ರ ಸಾಧ್ಯ ಎಂದರು.

ಆಝಾನ್ ವಿರುದ್ಧ ಈಶ್ವರಪ್ಪ ಹೇಳಿಕೆ ಮುಸ್ಲಿಮರ ನಂಬಿಕೆಗೆ ಘಾಸಿ ತರುವ ಷಡ್ಯಂತರ ,ಕೋಮು ಗಲಭೆ ನಡೆಸುವ ಹುನ್ನಾರ : ಎಸ್‌ ಡಿಪಿಐ – Vishwanews24

ಯಾವುದೇ ವ್ಯಾಕ್ಸಿನ್‌ ತಯಾರಿಕೆ, ಆಕ್ಸಿಜನ್‌ ತಯಾರಿಕೆ ನಮ್ಮ ದೇಶದಲ್ಲಿ ಇರಲ್ಲಿಲ್ಲ, ಮೋದಿಯವರು ಪ್ರಧಾನಿಯಾದ ಮೇಲೆ ಇದು ಸಾಧ್ಯವಾಗಿದೆ, ಪ್ರತಿ ತಾಲೂಕು ಕೇಂದ್ರದಲ್ಲಿಯೂ ಆಕ್ಸಿಜನ್‌ ಘಟಕಗಳಿದ್ದು ಸಹಸ್ರಾರು ಪ್ರಾಣ ಉಳಿಯುವಂತಾಗಿದೆ ಎಂದರು. ಭಾರತಿಯ ಸೇನಾಪಡೆ, ಕೃಷಿ ವಲಯ, ಶಿಕ್ಷಣ, ಅರೋಗ್ಯ, ಆಹಾರ ಎಲ್ಲಾ ಕ್ಷೇತ್ರಗಳಿಗೂ ನ್ಯಾಯ ಒದಗಿಸುತ್ತಿರುವ ಪ್ರಧಾನಿ ಮೋದಿಯವರಿಗೆ ಮತ್ತಷ್ಟುಬಲ ತುಂಬಲು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಿಮ್ಮ ಆಯ್ಕೆಯಾಗಬೇಕು ಎಂದರು.

12 ಕೋಟಿ ವೆಚ್ಚದಲ್ಲಿ ತಾಯಿ ಮಗುವಿನ ಅಸ್ಪತ್ರೆಯನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿದ್ದು ಈಗಾಗಲೇ ನಿರ್ಮಾಣಗೊಂಡು ಶೀಘ್ರದಲ್ಲಿಯೇ ಉದ್ಘಾಟನೆಯಾಗಲಿದೆ. ಬೊಮ್ಮಯಿ ಅವರ ಸರ್ಕಾರದ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಸಾಕಷ್ಟುಅನುದಾನ ಹರಿದು ಬಂದಿದೆ. ಅದು ಫಲಾನುಭವಿಗಳನ್ನು ತಲುಪುವ ಬದಲು ಶಾಸಕರ ಅಪ್ತವಲಯಕ್ಕೆ ತಲುಪಿದೆ ಎಂದರು.

ಉಡುಪಿ: ಮಲ್ಪೆ ಮ್ಯಾನೇಜರ್ ಸುಬ್ಬಣ್ಣ ಆತ್ಮಹತ್ಯೆ ಪ್ರಕರಣ – ಸಾವಿಗೆ ಕಾರಣರಾದ ಎಲ್ಲರ ವಿರುದ್ದ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಜರಗಿಸಬೇಕು : ದಲಿತ ಸಂಘಟನೆ ಆಗ್ರಹ – Vishwanews24

Leave a Reply