ಚಿಕ್ಕಮಗಳೂರು: ಬೈಕ್ ಸವಾರರ ಮೇಲೆ ದಾಳಿ ಮಾಡಿದ ಕಾಡುಕೋಣ ; ಇಬ್ಬರಿಗೆ ಗಂಭೀರ ಗಾಯ – Vishwanews24
ಚಿಕ್ಕಮಗಳೂರು: ಬೈಕ್ ಸವಾರರ ಮೇಲೆ ದಾಳಿ ಮಾಡಿದ ಕಾಡುಕೋಣ; ಇಬ್ಬರಿಗೆ ಗಂಭೀರ ಗಾಯ
ಚಿಕ್ಕಮಗಳೂರು: ಬೈಕ್ ಸವಾರರ ಮೇಲೆ ಕಾಡುಕೋಣ ದಾಳಿ ಮಾಡಿ ಘಟನೆ ಜಿಲ್ಲೆಯ ಬಣಕಲ್ ಸಮೀಪದ ಮತ್ತಿಕಟ್ಟೆ ಗ್ರಾಮದ ಬಳಿ ನಡೆದಿದೆ. ಬೈಕಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದೆ.
ಕಲ್ಯಾಣಗದ್ದೆ ಗ್ರಾಮದ ದಿಲೀಪ್, ಆಶಾ ಗಾಯಗೊಂಡರು.ಇವರುಗಳು ರಾತ್ರಿ ಮೂಡಿಗೆರೆ ಪಟ್ಟಣದಿಂದ ಕಲ್ಯಾಣಗದ್ದೆ ಗ್ರಾಮಕ್ಕೆ ತೆರಳುವಾಗ ಕಾಡುಕೋಣ ದಾಳಿ ನಡೆಸಿದೆ.
ಗಾಯಾಳುಗಳು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾಡುಕೋಣ ದಾಳಿಗೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
