ಚಿಕ್ಕಮಗಳೂರು: ಮುಂದುವರಿದ ಮಳೆಯಬ್ಬರ ; ಜಿಲ್ಲೆಯಾದ್ಯಂತ ಭಾರಿ ವಾಹನ ಸಂಚಾರ ನಿಷೇಧ – Vishwanews24

Featured, ರಾಜ್ಯ ನ್ಯೂಸ್

ಚಿಕ್ಕಮಗಳೂರು: ಮುಂದುವರಿದ ಮಳೆಯಬ್ಬರ ; ಜಿಲ್ಲೆಯಾದ್ಯಂತ ಭಾರಿ ವಾಹನ ಸಂಚಾರ ನಿಷೇಧ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯಬ್ಬರ ಮುಂದುವರಿದಿದ್ದು, ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಾದ್ಯಂತ ಭಾರಿ ವಾಹನ ಸಂಚಾರವನ್ನ ನಿಷೇಧಿಸಲಾಗಿದೆ.

ಕಳೆದೆರಡು ವಾರದಿಂದ ಹೆಚ್ಚಿನ ಮಳೆ ಸುರಿಯುತ್ತಿದ್ದು, ರಸ್ತೆಗಳಲ್ಲಿ ಭೂಕುಸಿತ, ಸೇತುವೆಗಳಿಗೆ ಹಾನಿಯಾಗಿ ಚರಂಡಿ/ಮೋರಿಗಳು ತುಂಬಿ ಹರಿಯುತ್ತಿದ್ದು, ಹಾಗೂ ದೊಡ್ಡ ಗಾತ್ರದ ಮರಗಳು ಉರುಳಿ ರಸ್ತೆ ಹಾನಿಯಾಗಿದೆ.

ಈ ಸಮಯದಲ್ಲಿ ಭಾರೀ ವಾಹನಗಳು ಅಧಿಕ ಭಾರವನ್ನು ಹೊತ್ತುಕೊಂಡು ರಸ್ತೆಗಳಲ್ಲಿ ಸಂಚರಿಸಿದರೆ ಸೇತುವೆಗಳಿಗೆ ಇನ್ನಷ್ಟು ಹಾನಿಯಾಗಬಹುದು. ಹೀಗಾಗಿ ಜಿಲ್ಲೆಯಾದ್ಯಂತ 12,000 ಕೆಜಿ ಮೇಲ್ಪಟ್ಟ ವಾಹನಗಳ ಸಂಚಾರಕ್ಕೆ ನಿಷೇಧ ಹೇರಿ ಜಿಲ್ಲಧಿಕಾರಿ ಕೆ.ಎನ್.ರಮೇಶ್ ಆದೇಶಿಸಿದ್ದಾರೆ.

ದತ್ತಾತ್ರೇಯ ಬಾಬಾ ಬುಡನ್ ದರ್ಗಾ, ಸೀತಾಳಯ್ಯನಗಿರಿ, ಮುಳ್ಳಯನಗಿರಿ, ಮಾಣಿಕ್ಯದಾರ, ಗಾಳಿಕೆರೆ, ದಬ್ ದಬೆ ಫಾಲ್ಸ್ ಹಾಗೂ ಇತರೆ ಗಿರಿ ಪ್ರದೇಶಗಳಲ್ಲಿ ಭಾರೀ ಮಳೆಯ ಕಾರಣದಿಂದ ಕೈಮರ ಚೆಕ್ ಪೋಸ್ಟ್ ನಿಂದ ಹಾಗೂ ಕೆಮ್ಮಣ್ಣು ಗುಂಡಿ ಕ್ರಾಸ್ ನಿಂದ ಬಾಬಾ ಬುಡನ್ ದರ್ಗಾ ಮಾರ್ಗದಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಲಾಗಿತ್ತು.

ಸರ್ಕಾರಿ ಕಚೇರಿಯಲ್ಲಿ Photo, ವೀಡಿಯೋ ಬಂದ್ ; ಈಗ ಮೊದಲಿನಂತೆ ನಿಯಮ ಇರಲಿದೆ : ಸಿಎಂ ಸ್ಪಷ್ಟನೆ – Vishwanews24

Leave a Reply