ಚೀನಾದ 59 ಆಯಪ್ ಮೇಲೆ ಶಾಶ್ವತ ನಿಷೇಧ ಹೇರಿದ ಮೋದಿ ಸರ್ಕಾರ -Vishwanews24
ಚೀನಾ ಮೂಲದ 59 ಆಯಪ್ ಮೇಲೆ ಶಾಶ್ವತ ನಿಷೇಧ ಹೇರಿದ ಮೋದಿ ಸರ್ಕಾರ -Vishwanews24
ನವ ದೆಹಲಿ : ಸಿಕ್ಕಿಂನ ನಕು ಲಾದಲ್ಲಿ ಚೀನಾದ ಸೈನಿಕರೊಂದಿಗಿನ ಸಂಘರ್ಷ ನಡೆದ ಬೆನ್ನಲ್ಲೆ ಜನಪ್ರಿಯ ಟಿಕ್ ಟಾಕ್ ಸೇರಿದಂತೆ 59 ಚೀನಾ ಮೂಲದ ಆಯಪ್ ಮೇಲೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಶಾಶ್ವತ ನಿಷೇಧ ಹೇರಿದೆ ಎಂಬ ಮಾಹಿತಿ ಈಗ ಲಭ್ಯವಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಜನಪ್ರಿಯ ವಿಡಿಯೋ ಅಪ್ಲಿಕೇಶನ್ ಟಿಕ್ ಟಾಕ್ ಮತ್ತು ಇತರ 58 ಚೀನೀ ಅಪ್ಲಿಕೇಶನ್‌ಗಳಿಗೆ ಶಾಶ್ವತ ನಿಷೇಧ ಹೇರಲು ಹೊಸ ನೋಟಿಸ್ ನೀಡಿದೆ, ಕಳೆದ ವರ್ಷ ಜೂನ್‌ನಲ್ಲಿ ಈ ಸಂಬಂಧಿಸಿದಂತೆ ಸರ್ಕಾರ ನಿರ್ಬಂಧಗಳನ್ನು ವಿಧಿಸಿತ್ತು ಎಂದು ರಾಯಿಟರ್ಸ್ ವರದಿ ಮಾಡಿದೆ.
ಮೊದಲ ಬಾರಿಗೆ ಚೀನಾ ಮೂಲದ ಬೈಟ್ ಡ್ಯಾನ್ಸ್‌ನ ಜನಪ್ರಿಯ ವೀಡಿಯೊ-ಶೇರಿಂಗ್ ಅಪ್ಲಿಕೇಶನ್ ಟಿಕ್ ಟಾಕ್, ಟೆನ್ಸೆಂಟ್ ಹೋಲ್ಡಿಂಗ್ಸ್ ವೀಚಾಟ್ ಮತ್ತು ಅಲಿಬಾಬಾದ ಯುಸಿ ಬ್ರೌಸರನ್ನು ಒಳಗೊಂಡಿರುವ 59 ಅಪ್ಲಿಕೇಶನ್ ಗಳಿಗೆ ನಿಷೇಧ ಹೇರಿದಾಗ, ಅದರ ಸುರಕ್ಷತೆ ಮತ್ತು ಗೌಪ್ಯತೆಯ ಬಗ್ಗೆ ನಿಮ್ಮ ನಿಲುವನ್ನು ವಿವರಿಸಲು ಕೇಂದ್ರ ಸೂಚಿಸಿತ್ತು.
ಇದನ್ನೂ ಓದಿ : ಕಾಪು ತಾಲೂಕು ಗಣರಾಜ್ಯೋತ್ಸವ ಆಚರಣೆ : ಧ್ವಜರೋಹಣ ನೆರವೇರಿಸಿದ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ -Vishwanews24
ಕೇಂದ್ರ ಸರ್ಕಾರ ಕಂಪೆನಿಗಳು ನೀಡಿರುವ ಪ್ರತಿಕ್ರಿಯೆಗೆ ಸಮಾಧಾನ ತರಲಿಲ್ಲ. ಆದ್ದರಿಂದ, ಈ 59 ಅಪ್ಲಿಕೇಶನ್ ಗಳ ಶಾಶ್ವತ ನಿಷೇಧಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಈ ಅಪ್ಲಿಕೇಶನ್‌ಗಳು “ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ, ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಪೂರ್ವಾಗ್ರಹ ಪೀಡಿತವಾಗಿವೆ” ಎಂದು ಸಚಿವಾಲಯದ ಕಳೆದ ಜೂನ್ ಅಲ್ಲಿ ನೀಡಲಾಗಿದ್ದ ಆದೇಶದಲ್ಲಿ ತಿಳಿಸಿದೆ.
ವಿವಾದಿತ ಹಿಮಾಲಯನ್ ಗಡಿ ಭಾಗದಲ್ಲಿ ಚೀನಾದ ಸೈನಿಕರೊಂದಿಗೆ ಸಂಘರ್ಷ ನಡೆದು 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಆ ಬಳಿಕ ಭಾರತವು ಚೀನಾ ಮೂಲದ 59 ಅಪ್ಲಿಕೇಶನ್ ನನ್ನು ನಿಷೇಧಿಸುವ ನಿರ್ಧಾರ ತೆಗೆದುಕೊಂಡಿದ್ದು, ಇದನ್ನು “ಡಿಜಿಟಲ್ ಸ್ಟ್ರೈಕ್” ಎಂದು ಕರೆಯಲಾಗಿತ್ತು.
