ಚೆನ್ನೈ: ರೈಲ್ವೆ ಹಳಿ ಮೇಲೆ ನಿಂತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಅಪ್ಲೋಡ್ : ಯುವಕರ ಮೇಲೆ ಹರಿದ ರೈಲು, ಮೂವರು ಸಾವು – Vishwanews24
ರೈಲ್ವೆ ಹಳಿ ಮೇಲೆ ನಿಂತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಅಪ್ಲೋಡ್ : ಯುವಕರ ಮೇಲೆ ಹರಿದ ರೈಲು, ಮೂವರು ಸಾವು
ಚೆನ್ನೈ: ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಅಪ್ಲೋಡ್ ಮಾಡಲು ಮೂವರು ಯುವಕರು ರೈಲ್ವೆ ಹಳಿ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾಗ ದಿಢೀರ್ ಆಗಮಿಸಿದ ರೈಲಿಗೆ ಒಂದೇ ಊರಿನ ಮೂವರು ವಿದ್ಯಾರ್ಥಿಗಳು ಉಸಿರು ನಿಲ್ಲಿಸಿದ್ದಾರೆ.

ಚೆಂಗಲ್ಪಟ್ಟು ಪಕ್ಕದ ಚೆಟ್ಟಿಪುನ್ನಿಯಂ ಪ್ರದೇಶದ ಅಶೋಕ್ ಕುಮಾರ್, ಪ್ರಕಾಶ್ ಮತ್ತು ಮೋಹನ್ ಎಂಬುವರು ಮೃತ ವಿದ್ಯಾರ್ಥಿಗಳು. ಇವರು ಆಗಾಗ ಸೆಲ್ಫಿ ವಿಡಿಯೋ ಮಾಡಿ ಇನ್ ಸ್ಟಾಗ್ರಾಮ್ನಲ್ಲಿ ಹಾಕುತ್ತಿದ್ದರು.

ಮಾರ್ಚ್ 7ರ ಸಂಜೆ ಮೂವರು ರೈಲು ಹಳಿ ಮೇಲೆ ನಿಂತು ವಿಡಿಯೋ ಮಾಡುತ್ತಿದ್ದಾಗ ಚೆನ್ನೈನಿಂದ ಚೆಂಗಲ್ಪಟ್ಟಿಗೆ ಬರುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಯುವಕರ ಮೃತದೇಹ ಸ್ಥಳದಲ್ಲೇ ಚೆಲ್ಲಾಪಿಲ್ಲಿಯಾಗಿದ್ದು, ಧಾರುಣವಾಗಿ ಸಾವನ್ನಪ್ಪಿದ್ದಾರೆ.
ಚೆಂಗಲ್ಪಟ್ಟು ರೈಲ್ವೆ ಪೊಲೀಸರು ಯುವಕರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
