ಜಗದೀಶ್‌ ಶೆಟ್ಟರ್‌ ನಮ್ಮ ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ : ಡಿ.ಕೆ ಶಿವಕುಮಾರ್ – vishwanews24

Featured, ರಾಜ್ಯ ನ್ಯೂಸ್

ಜಗದೀಶ್‌ ಶೆಟ್ಟರ್‌ ನಮ್ಮ ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ : ಡಿ.ಕೆ ಶಿವಕುಮಾರ್

ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಜಗದೀಶ್ ಶೆಟ್ಟರ್ ಗೆ ಯಾವುದೇ ದ್ರೋಹವಾಗಿಲ್ಲ, ಹಿರಿಯರು ಎಂದು ಅವರನ್ನು ಬಹಳ ಗೌರವದಿಂದ ನೋಡಿಕೊಂಡಿದ್ದೆವು. ಆದರೆ ಜಗದೀಶ್‌ ಶೆಟ್ಟರ್‌ ನಮ್ಮ ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಶೆಟ್ಟರ್‌ಗೆ ಯಾವುದೇ ಅನ್ಯಾಯವಾಗಿಲ್ಲ. ಆದರೆ ಜಗದೀಶ್‌ ಶೆಟ್ಟರ್‌ ನಮ್ಮ ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ. ಪಕ್ಷ ಸೇರ್ಪಡೆ ಸಂದರ್ಭ ನಾನು ಕಾಂಗ್ರೆಸ್‌ಗೆ ದ್ರೋಹ ಮಾಡಲ್ಲ ಎಂದು ಹೇಳಿದ್ದರು. ಆದರೆ ಜಗದೀಶ್‌ ಶೆಟ್ಟರ್‌ ನಮ್ಮ ವಿಶ್ವಾಸಕ್ಕೆ ದ್ರೋಹ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ತೊರೆದು ಬಿಜೆಪಿಗೆ ಮರು ಸೇರ್ಪಡೆಯಾದ ಜಗದೀಶ್ ಶೆಟ್ಟರ್ – vishwanews24

ನಾನು ನಿನ್ನೆ ಅವರೊಂದಿಗೆ ಮಾತನಾಡಿದಾಗಲೂ ನಾನು ಬಿಜೆಪಿಗೆ ಹೋಗಲ್ಲ ಎಂದಿದ್ದರು. ಸೀನಿಯರ್‌ ಲೀಡರ್‌ ಎಂದು ನಾವು ಅವರಿಗೆ ಸ್ಥಾನಮಾನ ಕೊಟ್ಟಿದ್ದೇವೆ. ಬಿಜೆಪಿ ಅವರನ್ನು ತಿರಸ್ಕರಿಸಿದಾಗ ನಾವು ಗೌರವ ನೀಡಿದ್ದೇವು, ಒತ್ತಡದಿಂದ ಅವರನ್ನು ಕರೆದುಕೊಂಡು ಹೋಗಿದ್ದಾರೋ ನನಗೆ ಗೊತ್ತಿಲ್ಲ. ಈಗ ಅವರು ರಾಜೀನಾಮೆ ಪತ್ರವನ್ನು ಫ್ಯಾಕ್ಸ್‌ ಮಾಡಿದ್ದಾರೆ ಅವರ ಆತ್ಮಸಾಕ್ಷಿಯನ್ನು ಕೇಳಲಿ ಎಂದು ಅವರು ತಿಳಿಸಿದರು.

Leave a Reply