ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ಜನಾದೇಶ ಗೆದ್ದವರಿಗೆ ಶುಭಾಶಯಗಳು: ರಾಹುಲ್​ ಗಾಂಧಿ – Vishwanews24

Featured, ರಾಷ್ಟ್ರ ನ್ಯೂಸ್

ಈ ಚುನಾವಣಾ ಫಲಿತಾಂಶದಿಂದ ನಾವು ಸಾಕಷ್ಟು ವಿಚಾರ ಕಲಿತ್ತಿದ್ದೇವೆ..

ಎಲ್ಲ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸ್ವಯಂಸೇವಕರ ಶ್ರಮ ಹಾಗೂ ಸಮರ್ಪಣೆಗೆ ನನ್ನ ಕೃತಜ್ಞತೆಗಳು..

ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ..

ನವದೆಹಲಿ: ಪಂಚರಾಜ್ಯ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಜನಾದೇಶ ಗೆದ್ದವರಿಗೆ ಶುಭಾಶಯಗಳು. ಈ ಚುನಾವಣಾ ಫಲಿತಾಂಶದಿಂದ ನಾವು ಸಾಕಷ್ಟು ವಿಚಾರ ಕಲಿತ್ತಿದ್ದೇವೆ ಎಂದಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ. ಜನಾದೇಶವನ್ನು ಗೆದ್ದವರಿಗೆ ಶುಭಾಶಯಗಳು.ಎಲ್ಲಾ ಕಾಂಗ್ರೆಸ್ಕಾರ್ಯಕರ್ತರು ಮತ್ತು ಸ್ವಯಂಸೇವಕರಿಗೆ ಅವರ ಶ್ರಮ ಮತ್ತು ಸಮರ್ಪಣೆಗಾಗಿ ನನ್ನ ಕೃತಜ್ಞತೆಗಳು.ನಾವು ಇದರಿಂದ ಕಲಿಯುತ್ತೇವೆ ಮತ್ತು ಭಾರತದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುತ್ತಲೇ ಇರುತ್ತೇವೆ” ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

Leave a Reply