ರಾಮನಗರ: ಕಾವೇರಿ ನೀರಿಗಾಗಿ ನಮ್ಮ ಹೋರಾಟ ಮುಂದುವರಿಸುತ್ತೇವೆ, ಕೋವಿಡ್ ಮೂರನೇ ಅಲೆ ಹೆಚ್ಚಳ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ತಾತ್ಕಾಲಿಕ ಸ್ಥಗಿತ ನೀಡುತ್ತಿದ್ದೇವಷ್ಟೆ, ಮುಂದಿನ ದಿನಗಳಲ್ಲಿ ರಾಮನಗರದಿಂದಲೇ ಪಾದಯಾತ್ರೆ ಪುನರಾರಂಭಿಸುತ್ತೇವೆ, ಹಾಗೂ ಪಾದಯಾತ್ರೆ ಅಂತ್ಯ ಮಾಡಲು ನಿರ್ಧರಿಸಿದ ಸ್ಥಳದಲ್ಲಿಯೇ ಕೊನೆಗೊಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಜೊತೆ ಚರ್ಚೆ ನಡೆಸಿ ಸಿದ್ದರಾಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ ಜನರೇ ನಮಗೆ ಮುಖ್ಯ, ಅವರ ಹಿತದೃಷ್ಟಿಯಿಂದ ಪಾದಯಾತ್ರೆಗೆ ತಾತ್ಕಾಲಿಕ ವಿರಾಮ ಹಾಕುತ್ತಿದ್ದೇವೆ ಹೊರತು ರಾಜ್ಯ ಸರ್ಕಾರದ ಕೇಸಿಗೆ ಹೆದರಿ ಅಲ್ಲ, ಜನತೆಗೆ ತಪ್ಪು ಸಂದೇಶ ಹೋಗಬಾರದು ಎಂಬುದು ನಮ್ಮ ಉದ್ದೇಶ ಎಂದರು.
ಕಾಂಗ್ರೆಸ್ ಹಳೆಯ ರಾಷ್ಟ್ರೀಯ ಪಕ್ಷವಾಗಿದ್ದು ಯಾವತ್ತಿಗೂ ಜನತೆಗೆ ಪರವಾಗಿ ನಿಂತಿದೆ, ಇನ್ನು ಮುಂದೆಯೂ ನಿಲ್ಲುತ್ತದೆ. ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ನಮಗೂ ಜವಾಬ್ದಾರಿಯಿದೆ. ನಾಡು-ನುಡಿ, ಜಲ, ನೆಲದ ರಕ್ಷಣೆಯ ವಿಚಾರ ಬಂದಾಗ ಕಾಂಗ್ರೆಸ್ ಪಕ್ಷ ಹೋರಾಟದಲ್ಲಿ ಯಾವತ್ತಿಗೂ ಮುಂಚೂಣಿಯಲ್ಲಿರುತ್ತದೆ. ಹೋರಾಟ ಎಂಬುದು ಕಾಂಗ್ರೆಸ್ ಪಕ್ಷದ ರಕ್ತದಲ್ಲಿಯೇ ಇದೆ, ಇಂದು ತಾತ್ಕಾಲಿಕ ಸ್ಥಗಿತ ನೀಡಿದ್ದೆ ಹೊರತು ಮೇಕೆದಾಟು ಯೋಜನೆ ಪರ ನಮ್ಮ ಹೋರಾಟ ಈಡೇರುವವರೆಗೆ ಮುಂದುವರಿಯುತ್ತದೆ ಎಂದರು.
ಬಿಜೆಪಿಯವರು ಪಕ್ಷಪಾತಿಗಳಂತೆ ವರ್ತಿಸಬಾರದು. ಕೊರೋನಾ ಮೂರನೇ ಅಲೆ ಆರಂಭವಾಗಿದ್ದರೂ ಬಿಜೆಪಿಯವರ ಸಭೆ-ಸಮಾರಂಭ, ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿರಲಿಲ್ಲ. ಆಗಲೇ ನಿರ್ಬಂಧ ಹೇರಿದ್ದರೆ 3ನೇ ಅಲೆ ಇಷ್ಟೊಂದು ಹರಡುವ ಸಾಧ್ಯತೆಯಿತ್ತೇ ಎಂದು ಪ್ರಶ್ನಿಸಿದರು.
ಮೂರು ದಿನ ಮೌನ ಎಂದಿದ್ದೇ. ವಿಧಿಯಿಲ್ಲದೇ ಇಂದು ಮೌನ ಮುರಿಯುತ್ತಿದ್ದೇನೆ. ಕೊರೊನಾ ಸೋಂಕಿತ ಡಿಸಿಯ ನೋಟಿಸ್ ನೀಡಲು ಬಂದಿದ್ದರು. ರಾಮನಗರ ಎಸಿ, ಡಿವೈಎಸ್ಪಿ ನೋಟಿಸ್ ನೀಡಲು ಬಂದಿದ್ದರು. ಕೊರೊನಾ ಹಿನ್ನೆಲೆ ಡಿಸಿ ಮನೆಯಿಂದ ಹೊರಬಂದಿರಲಿಲ್ಲ. ಆದರೆ ಸೋಂಕಿತ ಡಿಸಿ ಸಹಿಯುಳ್ಳ ನೋಟಿಸ್ ನೀಡಿದ್ದಾರೆ.
ನಿಮ್ಮ ಹೋರಾಟದ ವೇಳೆ ಜನರಿಗೆ ಸಮಸ್ಯೆ ಆಗಬಾರದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾದಯಾತ್ರೆ ಸಾಗುತ್ತೆ. ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ರಸ್ತೆ ಬದಿ ನಡೆಯಿರಿ ಎಂದು ಡಿಸಿ ನೋಟಿಸ್ ಉಲ್ಲೇಖವಾಗಿದ್ದ ಅಂಶಗಳ ಬಗ್ಗೆ ಕೂಡ ಇಂದು ಸುದ್ದಿಗೋಷ್ಠಿಯಲ್ಲಿ ಡಿ ಕೆ ಶಿವಕುಮಾರ್ ಮಾಹಿತಿ ನೀಡಿದರು. ಮತ್ತೊಂದೆಡೆ ಎಸ್ಪಿಗೆ ಸೂಚಿಸಿದ್ದ ಜಿಲ್ಲಾಧಿಕಾರಿ ಪಾದಯಾತ್ರೆಗೆ ಬೇಕಾದ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು ಎಂದು ಕೂಡ ತಿಳಿಸಿದರು.
ಜನರ ದೃಷ್ಟಿಯಿಂದ ಪಾದಯಾತ್ರೆ ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಮತ್ತೆ ಇಲ್ಲಿಂದಲೇ ಪಾದಯಾತ್ರೆ ಪುನಾರಂಭ ಮಾಡುತ್ತೇವೆ. ಬೇಸರ ಅನ್ನೋದಕ್ಕಿಂತ ಜನರ ದೃಷ್ಟಿಯಿಂದ ಸ್ಥಗಿತಗೊಳಿಸಿದ್ದೇವೆ. ಶಾಸಕರು, ಕಾರ್ಯಕರ್ತರು ಪಾದಯಾತ್ರೆ ಯಶಸ್ವಿಗೊಳಿಸಿದ್ದಾರೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…