ಜಾರಕಿಹೊಳಿ ಸಿಡಿ ಪ್ರಕರಣ  : ಎಸ್‌ಐಟಿ ಮುಂದೆ ನರೇಶ್‌‌ ಗೌಡ, ಶ್ರವಣ್‌ – Vishwanews24

Featured, ರಾಜ್ಯ ನ್ಯೂಸ್

ಜಾರಕಿಹೊಳಿ ಸಿಡಿ ಪ್ರಕರಣ  : ಎಸ್‌ಐಟಿ ಮುಂದೆ ನರೇಶ್‌‌ ಗೌಡ, ಶ್ರವಣ್‌ – Vishwanews24

ಬೆಂಗಳೂರು, : ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಆರೋಪಿಗಳಾದ ನರೇಶ್‌‌ ಗೌಡ ಹಾಗೂ ಶ್ರವಣ್‌ ಎಸ್‌ಐಟಿ ಮುಂದೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಸದಾಶಿವನಗರ ಠಾಣೆಯಲ್ಲಿ ದಾಖಲಾಗಿದ್ದ ಬ್ಯ್ಲಾಕ್‌‌ ಮೇಲ್‌ ಪ್ರಕರಣದಲ್ಲಿ ಅವರು ತನಿಖೆಗೆ ಹಾಜರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ಠಾಣೆಯ ತನಿಖಾಧಿಕಾರಿಗಳು ನೋಟಿಸ್‌‌ ನೀಡಿದ್ದರು. ಈ ಹಿನ್ನೆಲೆ ನರೇಶ್‌ ಗೌಡ ಹಾಗೂ ಶ್ರವಣ್‌‌ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಬ್ಲ್ಯಾಕ್​​ಮೇಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕೂಡಾ ಸೆಷನ್ಸ್‌‌ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ತಮ್ಮ ಮೇಲೆ ಕೇಳಿಬಂದ ಸಿಡಿ ಪ್ರಕರಣದ ಬಳಿಕ ನರೇಶ್‌ ಗೌಡ ಹಾಗೂ ಶ್ರವಣ್‌ ಮೇಲೆ ರಮೇಶ್ ಜಾರಕಿಹೊಳಿ ಹನಿಟ್ರ್ಯಾಪ್‌ ಹಾಗೂ ಬ್ಲ್ಯಾಕ್​ಮೇಲ್‌ ಆರೋಪವನ್ನು ಮಾಡಿದ್ದರು. ಈ ಪ್ರಕರಣದಲ್ಲಿ ಇಬ್ಬರು ಕೂಡಾ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ತನಿಖೆಯ ಬಳಿಕ ಮಾಹಿತಿ ತಿಳಿದುಬರಬೇಕಿದೆ.