ಜಿಲ್ಲಾ ರೈತ ಮೋರ್ಚಾದಿಂದ ರೈತಪರ ನಿರ್ಧಾರಕ್ಕಾಗಿ ಮಾಜಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಮರ್ಪಣೆ -Vishwanews24

Featured, ಉಡುಪಿ

ಜಿಲ್ಲಾ ರೈತ ಮೋರ್ಚಾದಿಂದ ರೈತಪರ ನಿರ್ಧಾರಕ್ಕಾಗಿ ಮಾಜಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಮರ್ಪಣೆ -Vishwanews24

ರಾಜ್ಯ ರೈತ ಮೋರ್ಚಾ ನಿಯೋಗದ ಮನವಿಗೆ ಸ್ಪಂದಿಸಿ, ಸಹಕಾರಿ ಸಂಘಗಳಲ್ಲಿ ರೈತರ ಕೃಷಿ ಸಾಲದ ಮೇಲೆ ಜಾರಿಗೆ ತಂದಂತಹ ಷರತ್ತನ್ನು ಸಡಿಲಿಕೆ ಮಾಡಿ, ರೈತರ ಪರವಾಗಿ ನಿಂತ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಹಾಗೂ ಹಿಂದಿನ ಸಹಕಾರ ಸಚಿವರಾಗಿದ್ದ ಶ್ರೀ ಎಸ್.ಟಿ. ಸೋಮಶೇಖರ್ ಅವರಿಗೆ ಜಿಲ್ಲಾ ರೈತ ಮೋರ್ಚಾದಿಂದ ಧನ್ಯವಾದಗಳನ್ನು ಸಮರ್ಪಿಸುತ್ತೇವೆ.

ದಿನಾಂಕ 21, ಜೂನ್ 2021ರಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಶ್ರೀ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ರಾಜ್ಯ ರೈತ ಮೋರ್ಚಾ ಪದಾಧಿಕಾರಿಗಳ ನಿಯೋಗ ಹಿಂದಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಹಲವಾರು ಬೇಡಿಕೆಗಳನ್ನು ಈಡೇರಿಸಲು ಮನವಿಯನ್ನು ಮಾಡಿತ್ತು. ಅದರಲ್ಲಿ ಪ್ರಮುಖವಾಗಿ ಶ್ರೀ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಹಿಂದಿನ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಘೋಷಣೆ ಮಾಡಿದಾಗ ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಾಲ ಮನ್ನಾ ಮಾಡುವ ಷರತ್ತನ್ನು ವಿಧಿಸಿತ್ತು. ಆರ್ಥಿಕ ಇಲಾಖೆ ಈ ಷರತ್ತನ್ನು ಸಾಲ ಮಂಜೂರಾತಿಗೆ ಅನ್ವಯವಾಗುವಂತೆ ಆದೇಶ ಹೊರಡಿಸಿದ ಪರಿಣಾಮವಾಗಿ ಲಕ್ಷಾಂತರ ರೈತರು ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯುವ ಅವಕಾಶದಿಂದ ವಂಚಿತರಾಗಿ, ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಇದನ್ನು ಮನಗಂಡು ರಾಜ್ಯ ರೈತ ಮೋರ್ಚಾ ನಿಯೋಗ ಆಗ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಗಮನಕ್ಕೆ ತಂದು, ಈ ಮೇಲಿನ ಷರತ್ತನ್ನು ಸಡಿಲಗೊಳಿಸಿ, ಮೊದಲಿನ ಹಾಗೆ ಆರ್.ಟಿ.ಸಿ. ಹೊಂದಿದ ಎಲ್ಲ ರೈತರಿಗೂ ಶೂನ್ಯ ಬಡ್ಡಿ ದರದ ಸಾಲ ವಿತರಿಸಬೇಕೆಂದು ಮನವಿ ಸಲ್ಲಿಸಿದಾಗ ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿ, ಒಂದು ರೇಷನ್ ಕಾರ್ಡಿಗೆ ಒಬ್ಬರಿಗೆ ಮಾತ್ರ ಶೂನ್ಯ ಬಡ್ಡಿದರ ಸಾಲ ಎನ್ನುವ ಷರತ್ತನ್ನು ಹಿಂಪಡೆದು, ಆರ್‌ಟಿಸಿ ಹೊಂದಿದ ಎಲ್ಲ ರೈತರಿಗೂ 3 ಲಕ್ಷದವರೆಗೆ ಸಾಲ ನೀಡುವ ಮಹತ್ವದ ನಿರ್ಣಯವನ್ನು ಮಾಡಿ ಆದೇಶ ಹೊರಡಿಸಿದರು.

ರೈತರಿಗೆ ಅನುಕೂಲವಾಗುವಂತಹ ಆದೇಶ ಹೊರಡಿಸಿದ್ದಕ್ಕಾಗಿ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರು ಹಾಗೂ ಹಿಂದಿನ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರಿಗೆ ಹಾಗೂ ಈಗಿನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರಿಗೆ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇವೆ.

ಈ ಮನವಿಯನ್ನು ಸಲ್ಲಿಸಿದ ಸಂಧರ್ಭದಲ್ಲಿ ಬಿಜೆಪಿ ಉಡುಪಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಗುರ್ಮೆ, ಬಿಜೆಪಿ ಉಡುಪಿ ಜಿಲ್ಲಾ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಕಾಂಚನ್ ಸಿದ್ಧಾಪುರ ಮತ್ತು ಧೀರಜ್ ಕೆ ಎಸ್ ಉಪ್ಪೂರು, ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯರಾದ ರಾಘವೇಂದ್ರ ಉಪ್ಪೂರು ಹಾಗೂ ಉಡುಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಉಪಸ್ಥಿತರಿದ್ದರು.