ಜೆಡಿಎಸ್ಗೆ ಐದು ವರ್ಷದ ಅಧಿಕಾರ ಕೊಟ್ಟರೆ ಸಂಪೂರ್ಣ ಬಡತನ ನಿವಾರಣೆಗೆ ಬದ್ಧನಾಗುವೆ : ಎಚ್.ಡಿ.ಕುಮಾರಸ್ವಾಮಿ ಭರವಸೆ – Vishwanews24
ಜೆಡಿಎಸ್ಗೆ ಐದು ವರ್ಷದ ಅಧಿಕಾರ ಕೊಟ್ಟರೇ ಸಂಪೂರ್ಣ ಬಡತನ ನಿವಾರಣೆಗೆ ಬದ್ಧನಾಗುವೆ : ಎಚ್.ಡಿ.ಕುಮಾರಸ್ವಾಮಿ ಭರವಸೆ
ರಾಮನಗರ : ರಾಜ್ಯದಲ್ಲಿ ಶೇ.70 ರಷ್ಟು ಬಡತನವಿದ್ದು, ಶೇ.30 ರಷ್ಟು ಜನರು ಮಾತ್ರ ಆರ್ಥಿಕವಾಗಿ ಸ್ಥಿತಿವಂತರಿದ್ದಾರೆ. ಜೆಡಿಎಸ್ಗೆ ಐದು ವರ್ಷದ ಅಧಿಕಾರ ಕೊಟ್ಟರೇ ಸಂಪೂರ್ಣ ಬಡತನ ನಿವಾರಣೆಗೆ ಬದ್ಧನಾಗುವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ತಾಲೂಕಿನ ಕಸಬಾ ಹೋಬಳಿ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ಹರೀಸಂದ್ರ ಗ್ರಾಪಂ ವ್ಯಾಪ್ತಿಯ ನಾನಾ ಗ್ರಾಮಗಳ 110 ಜನ ಫಲಾನುಭವಿಗಳಿಗೆ ಇ-ಖಾತಾ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಮನಗರ ಕ್ಷೇತ್ರದ ಜನರು ಕೊಟ್ಟ ಶಕ್ತಿಯನ್ನು ರಾಜ್ಯದಲ್ಲಿ ಲಕ್ಷಾಂತರ ಜನರಿಗೆ ಧಾರೆ ಎರೆದಿದ್ದೇನೆ. ನನ್ನ ಮತ್ತು ಕ್ಷೇತ್ರದ ಜನರ ಸಂಬಂಧ ತಾಯಿ ಮಗನ ಸಂಬಂಧ. ನನ್ನ ಜೀವನದ ಸವಾಲು ಪಂಚರತ್ನ ಯೋಜನೆಯಾಗಿದೆ. ಐದು ವರ್ಷದ ಅಧಿಕಾರ ಸಿಕ್ಕಿದರೆ ಬಡವರು ಬೇರೆಯವರ ಬಳಿ ಕೈಚಾಚದಂತೆ ನೋಡಿಕೊಳ್ಳುವುದಾಗಿ, ನಾನು ಬದುಕಿರುವವರೆಗೆ ರೈತರು ಮತ್ತು ಬಡವರಿಗಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.
ಇದನ್ನೂ ಓದಿ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ ಕಾಂಗ್ರೆಸ್ ಜನತೆಗೆ ಬಗೆದ ಘೋರ ದ್ರೋಹವನ್ನು ಪುಷ್ಠೀಕರಿಸಿದೆ: ಜಿಲ್ಲಾ ಬಿಜೆಪಿ – Vishwanews24
ಮುಂದಿನ 50 ವರ್ಷಗಳ ದೂರ ದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದೇನೆ. ಬೇರೆ ಪಕ್ಷದವರು ನನಗೊಂದು ಅವಕಾಶ ಕೊಡಿ ಆರ್ಶೀವದಿಸಿ ಎಂದು ಹೇಳಿದ್ದಾರೆ. ಅವರು ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆಯೇ? ಬಡವರ ಜಮೀನನ್ನು ಕಬಳಿಸಿ ಶಿಕ್ಷಣ ಸಂಸ್ಥೆ ಕಟ್ಟಿಕೊಂಡಿದ್ದಾರೆ. ಕನಕಪುರದಲ್ಲಿ ಗಣಿಗಾರಿಕೆ ಮಾಡಿ ಬಹಳಷ್ಟು ಜನರನ್ನು ಒಕ್ಕಲೆಬ್ಬಿಸಿದ್ದಾರೆ. ಇದೀಗ ಮುಖ್ಯಮಂತ್ರಿ ಆಗುವ ಆಸೆಯೊಂದಿಗೆ ಡ್ರಾಮಾ ಮಾಡುತ್ತಿದ್ದಾರೆ. ಅಂತಹವರ ಮಾತಿ ಮರುಳಾಗದಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಹೆಸರೇಳದೆ ವಾಗ್ದಾಳಿ ನಡೆಸಿದರು.
ಹರೀಸಂದ್ರ ಗ್ರಾಪಂ ಅಧ್ಯಕ್ಷೆ ಆಶಾ ಮಂಚೇಗೌಡ, ಉಪಾಧ್ಯಕ್ಷೆ ವಿಜಯಲಕ್ಷ್ಮೀ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಜೆಡಿಎಸ್ ವಕ್ತಾರ ಬಿ.ಉಮೇಶ್, ಮುಖಂಡರಾದ ಮೋಹನರಾಮ್, ಕೃಷ್ಣೇಗೌಡ, ರಾಜಣ್ಣ, ಜಯಕುಮಾರ್, ರವಿ, ಸುರೇಶ್, ಮಲ್ಲಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು.
ಇದನ್ನೂ ಓದಿ : ಶಿವಮೊಗ್ಗ: ಕಾಲೇಜು ಮುಂದೆ ಅಮಲಿನಲ್ಲಿ ವಿದ್ಯಾರ್ಥಿಗಳ ತೂರಾಟ ; ವಿಡಿಯೋ ವೈರಲ್ – Vishwanews24
