ಜೊತೆ ಜೊತೆಯಲಿ ನಾಯಕ ನಟ ಅನಿರುದ್ಧ್ ಗೆ 2 ವರ್ಷಗಳ ಕಾಲ ನಿಷೇಧ ಹೇರಿದ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ  – Vishwanews24

Featured, ರಾಜ್ಯ ನ್ಯೂಸ್

ಜೊತೆ ಜೊತೆಯಲಿ ನಾಯಕ  ನಟ ಅನಿರುದ್ಧ್ ಗೆ 2 ವರ್ಷಗಳ ಕಾಲ ನಿಷೇಧ ಹೇರಿದ ಕನ್ನಡ

ಕಿರುತೆರೆ ನಿರ್ಮಾಪಕರ ಸಂಘ ..

ಕಿರುತೆರೆಯ ಯಾವುದೇ ಕಾರ್ಯಕ್ರಮಗಳಲ್ಲಿ ಅನಿರುದ್ಧ್​ಗೆ ಅವಕಾಶ ಕೊಡದಂತೆ ನಿರ್ಧಾರ..

ಬೆಂಗಳೂರು : ಕನ್ನಡ ಜನಪ್ರಿಯ ಧಾರಾವಾಹಿ ‘ಜೊತೆ ಜೊತೆಯಲಿ ’ಧಾರವಾಹಿಯ ನಾಯಕ ನಟ ಅನಿರುದ್ಧ್ ಅವರ ಮೇಲೆ ಕನ್ನಡ ಕಿರುತೆರೆ ನಿರ್ಮಾಪಕರ ಸಂಘ 2 ವರ್ಷಗಳ ಕಾಲ ನಿಷೇಧ ಹೇರಿದೆ.

ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ನಟ ಅನಿರುದ್ಧ್ | Aniruddha Jatkar Apologized To  Fans For Not Reply To Fans Messages - Kannada Filmibeat

ಧಾರಾವಾಹಿಯ ನಿರ್ಮಾಪಕ ಅರೂರು ಜಗದೀಶ್ ದೂರಿನ ಮೇರೆಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಧಾರಾವಾಹಿ ನಿರ್ಮಾಪಕರೆಲ್ಲರೂ ಒಕ್ಕೊರಲಿನಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಕಿರುತೆರೆಯ ಯಾವುದೇ ಕಾರ್ಯಕ್ರಮಗಳಲ್ಲಿ ಅನಿರುದ್ಧ್​ಗೆ ಅವಕಾಶ ಕೊಡದಂತೆ ನಿರ್ಧರಿಸಲಾಗಿದೆ ಎಂದು ಕಿರುತೆರೆ ನಿರ್ಮಾಪಕರ ಸಂಘದ ಅಧ್ಯಕ್ಷ ಭಾಸ್ಕರ್ ತಿಳಿಸಿದ್ದಾರೆ.

ಜೊತೆ ಜೊತೆಯಲಿ ತಂಡದಿಂದ ಅನಿರುದ್ಧ್ ಬ್ಯಾನ್ …! - Raj News Kannada

ಡೈಲಾಗ್ ಬದಲಿಸುವಂತೆ ಸ್ಕ್ರೀಪ್ಟ್ ಬದಲಿಸುವಂತೆ ನಟ ಅನಿರುದ್ಧ್ ಮೂಗುತೂರಿಸುತ್ತಾರೆ ಎನ್ನಲಾಗಿದ್ದು, ಇದಲ್ಲದೇ ತಂತ್ರಜ್ಞರ ತಂಡ ಮುನಿಸಿಕೊಂಡಿದೆ ಎನ್ನಲಾಗಿದೆ. ಆದರೆ ಇದಕ್ಕೆ ತದ್ವಿರುದ್ದವಾಗಿ “ನಿಷೇಧ” ಇಂತಹ ಕ್ರಮಕ್ಕೆ ಯಾವುದೇ ಅವಕಾಶವಿಲ್ಲ. ಮೆಗಾ ಸೀರಿಯಲ್ ಸೆಟ್​ಗಳಲ್ಲಿ ಈ ರೀತಿ ಘಟನೆ ಸರ್ವೆ ಸಾಮಾನ್ಯ. ಒಂದು ವೇಳೆ ಧಾರವಾಹಿ ಪ್ರಸಾರ ಆಗುತ್ತಿರುವ ಚಾನೆಲ್​ ಕಲಾವಿದನನ್ನು ನಿಷೇಧಿಸಬಹುದು. ಇದರ ಹೊರತಾಗಿ ಏಕಾಏಕಿ ಯಾರನ್ನು ಬ್ಯಾನ್ ಮಾಡುವ ಅವಕಾಶ ಇಲ್ಲಅವುಗಳನ್ನೆಲ್ಲಾ ಕೂತು ಅವರೇ ಬಗೆಹರಿಸಿಕೊಳ್ಳಬೇಕು ಎಂದು ಟೆಲಿವಿಷನ್ ಅಸೋಸಿಯೇಷನ್ ಹೇಳಿಕೊಂಡಿದೆ.

ಪಠ್ಯಪುಸ್ತಕ ವಿವಾದ: ನಾರಾಯಣ ಗುರು ಪಾಠವನ್ನು ಸಮಾಜ ವಿಜ್ಞಾನಕ್ಕೆ ಸೇರಿಸಿ ಪ್ರತ್ಯೇಕ ಸುತ್ತೋಲೆ ಹೊರಡಿಸಿದ ಸರ್ಕಾರ – Vishwanews24

Leave a Reply