ಜ್ಯೂನಿಯರ್ ಚಿರು ಈಗ ರಾಯನ್ ರಾಜ್ ಸರ್ಜಾ -Vishwanews24
ಚಿರು ಮೇಘನಾ ರಾಜ್ ದಂಪತಿಯ ಮುದ್ದಾದ ಮಗನಿಗೆ ಇಂದು ನಾಮಕರಣ ಸಂಭ್ರಮ..
ಜ್ಯೂನಿಯರ್ ಚಿರು ಈಗ ರಾಯನ್ ರಾಜ್ ಸರ್ಜಾ -Vishwanews24
ಬೆಂಗಳೂರು: ಸ್ಯಾಂಡಲ್ವುಡ್ ದಿವಂಗತ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಾದ ಮಗನ ಹೆಸರು ಇಂದು ಬಹಿರಂಗಗೊಂಡಿದೆ.
ಇಷ್ಟು ದಿನ ಜ್ಯೂನಿಯರ್ ಚಿರು ಎಂದೇ ಫೇಮಸ್ ಆಗಿದ್ದ ಜ್ಯೂನಿಯರ್ ಚಿರುಗೆ ಇಂದು ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಜ್ಯೂನಿಯರ್ ಚಿರುಗೆ ರಾಯನ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ಸಂಸ್ಕೃತದಲ್ಲಿ ರಾಯನ್ ಅಂದರೆ ಯುವರಾಜ ಎಂಬ ಅರ್ಥವಿದೆ.
ಸೆಪ್ಟೆಂಬರ್ 3ರಂದು ಜ್ಯೂನಿಯರ್ ಚಿರು ನಿಜವಾದ ಹೆಸರನ್ನು ಕುಟುಂಬದವರು ರಿವೀಲ್ ಮಾಡಲು ನಿರ್ಧರಿಸಿರುವುದಾಗಿ ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೋ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದರು.
ಅದರಂತೆ ಇದೀಗ ಚಿರಂಜೀವಿ ಸರ್ಜಾ ಪುತ್ರನಿಗೆ ‘ರಾಯನ್ ರಾಜ್ ಸರ್ಜಾ’ ಎಂದು ಹೆಸರಿಡಲಾಗಿದೆ.
