ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ  – vishwanews24

Featured, ಉಡುಪಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ

ಉಡುಪಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ, ಮಾಜಿ ಕೋಚ್ ಹಾಗೂ ಕಮೆಂಟೇಟೆರ್ ರವಿಶಾಸ್ತ್ರಿ ಅವರಿಂದು (ಸೆ.24) ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದರು.

ಮಠಕ್ಕೆ ಆಗಮಿಸಿದ ರವಿಶಾಸ್ತ್ರಿ ಅವರನ್ನು ಪರ್ಯಾಯ ಶ್ರೀ ಶೀರೂರು ಮಠದ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸ್ವಾಗತಿಸಿ, ಫಲ ಹಾಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಬಳಿಕ ಶ್ರೀಕೃಷ್ಣನ ದರ್ಶನ ಪಡೆದ ಅವರು ಮಠದ ಧಾರ್ಮಿಕ ಪರಂಪರೆ ಹಾಗೂ ವ್ಯವಸ್ಥೆಗಳ ಕುರಿತು ಮಾಹಿತಿ ಪಡೆದರು.

ಇದನ್ನೂ ಓದಿ:

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ – vishwanews24

ಈ ಸಂದರ್ಭದಲ್ಲಿ ಮಠದ ಪಾರುಪತ್ಯೆಗಾರರಾದ ಶ್ರೀಶ ಭಟ್ ಕಡೇಕಾರು ಉಪಸ್ಥಿತರಿದ್ದರು. ರವಿಶಾಸ್ತ್ರಿ ಅವರ ಶ್ರೀಕೃಷ್ಣ ಮಠ ಭೇಟಿಯ ಸಂದರ್ಭದಲ್ಲಿ ಮಠದ ಸಿಬ್ಬಂದಿ ಹಾಗೂ ಭಕ್ತರು ಉಪಸ್ಥಿತರಿದ್ದರು.

Leave a Reply