Featured

ಡಾ ಎಮ್.ಎನ್ ರಾಜೇಂದ್ರ ಕುಮಾರ್ ವಿಧಾನಪರಿಷತ್ತು ಚುನಾವಣೆಗೆ ಪಕ್ಷೇತರ ಅಭ್ಯರ್ಥಿ…?vishwanews24

ಡಾ ಎಮ್.ಎನ್ ರಾಜೇಂದ್ರ ಕುಮಾರ್ ವಿಧಾನಪರಿಷತ್ತು ಚುನಾವಣೆಗೆ ಪಕ್ಷೇತರ ಅಭ್ಯರ್ಥಿ…?

ಮಂಗಳೂರು: ಹೌದು ಈಗಾಗಲೇ ವಿಧಾನಪರಿಷತ್ ಚುನಾವಣೆಗೆ ದಿನ ನಿಗದಿ ಯಾಗುತ್ತಿದ್ದಂತೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ ಇತ್ತ ಕಡೆಯಿಂದ ವಿಧಾನಪರಿಷತ್ ಸದಸ್ಯರಾಗಲು ಮೂರು ಪಕ್ಷದಿಂದಲೂ ಕಾರ್ಯಚಟುವಟಿಕೆ ಆರಂಭವಾಗಿದ್ದು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಬಾರಿ ಜೋರಾಗಿಯೇ ನಡೆಯುತ್ತಿದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಸದ್ಯ ಹೊಸ ರಾಜಕೀಯ ಸಂಚಲನ ನಡೆಸಲು ಮುಂದಾಗಿರುವ ವ್ಯಕ್ತಿಯೊಬ್ಬರ ಹೆಸರು ಕೇಳಿಬರುತ್ತಿದೆ. ಗ್ರಾಮೀಣ ಅಭಿವೃದ್ಧಿಯ ಹರಿಕಾರ ಸಹಕಾರಿ ರಂಗದ ಧುರಿಣ ಡಾಕ್ಟರ್ ಎಮ್ ಎನ್ ರಾಜೇಂದ್ರ ಕುಮಾರ್ ….!


ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ 25 ವರ್ಷಗಳಲ್ಲಿ ನಿರಂತರ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಎಂ.ಎನ್ ಆರ್ .
ಸಹಕಾರಿ ರಂಗದಲ್ಲಿ ಅತ್ಯದ್ಭುತ ಸೇವೆಯನ್ನು ಸಲ್ಲಿಸಿರುವ ವ್ಯಕ್ತಿಯಾಗಿದ್ದು ಮತ್ತು ರಾಜಕೀಯ ರಹಿತವಾಗಿ ಸೇವೆ ಮಾಡುತ್ತಿರುವುದರಿಂದ ಹಾಗೂ ಸಹಕಾರಿ ನಿರ್ದೇಶಕರೇ ಅತೀ ಹೆಚ್ಚಾಗಿ ಪಂಚಾಯತ್ ಸದಸ್ಯರಾಗಿರುವುದರಿಂದ ಡಾ ಎಮ್ ಎನ್ ಆರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೆಂಬ ಸಹಕಾರಿಗಳ ಒತ್ತಡವು ಜಾಸ್ತಿಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ.

ಉಭಯ ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರ ಅತ್ಯಂತ ದೊಡ್ಡ ಕ್ಷೇತ್ರವಾಗಿದೆ. ಮುಖ್ಯವಾಗಿ ಗ್ರಾಮ ಪಂಚಾಯತ್ ಸದಸ್ಯರು ಯಾವುದೇ ರಾಜಕೀಯ ಪಕ್ಷದ ಚಿಹ್ನೆಯ ಅಡಿಯಲ್ಲಿ ಚುನಾವಣೆ ನಡೆದು ಗೆದ್ದು ಬಂದವರಲ್ಲ . ಹಾಗಾಗಿ ಸಹಕಾರಿ ರಂಗದ ಅತಿ ಹೆಚ್ಚು ನಿರ್ದೇಶಕರಿರುವವರೇ ಪಂಚಾಯತ್ ಸದಸ್ಯರು.
ಉಭಯ ಜಿಲ್ಲೆಯಲ್ಲಿ ಡಾಕ್ಟರ್ ರಾಜೇಂದ್ರ ಕುಮಾರ್ ಅವರು ವಿಧಾನಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ ಆದಲ್ಲಿ ಗೆಲುವು ಖಚಿತವಾಗಬಹುದು ಎಂಬ ಲೆಕ್ಕಾಚಾರ ಸಹಕಾರಿಗಳದ್ದಾಗಿದೆ.

ಇಂದು ಕರಾವಳಿಯಲ್ಲಿ ಮಹಿಳಾ ಸಬಲೀಕರಣ ಯಶಸ್ವಿಯಾಗಿದೆ ಎಂದರೆ ಅದಕ್ಕೆ ನವೋದಯ ಗುಂಪು ನೀಡಿದ ಬೆಂಬಲವನ್ನು ಮರೆಯಲು ಸಾಧ್ಯವೇ ಇಲ್ಲ. ಈ ಗುಂಪುಗಳ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ಅದರಲ್ಲೂ ಮಹಿಳೆಯರಲ್ಲಿ ನವೋದಯ ನಗು ಮೂಡಿಸಿದೆ ಆ ನಗುವಿನ ಹಿಂದಿನ ಶ್ರಮ ರಾಜೇಂದ್ರ ಕುಮಾರ್ ಎಂಬುದನ್ನು ಅಲ್ಲಗಲೆಯುವಂತಿಲ್ಲ.

ಇನ್ನೊಂದು ಕಡೆ ಮಹಿಳಾ ನವೋದಯ ಸ್ವಸಹಾಯ ಸಂಘದ ಮಹಿಳೆಯರು ವಿವಿಧ ಪಂಚಾಯಿತಿಗಳಲ್ಲಿ ಸದಸ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು ಇದು ಕೂಡ ಡಾಕ್ಟರ್ ಎಮ್ ಎನ್ ರಾಜೇಂದ್ರ ಕುಮಾರ್ ಅವರ ಗೆಲುವಿಗೆ ಪೂರಕವಾಗಬಹುದು ಎಂಬ ಮಾತು ಕೂಡ ಕೇಳಿ ಬಂದಿದೆ. ಈಗಾಗಲೇ ನೂರಾರು ಸಹಕಾರಿ ಸಂಘಗಳ ನಿರ್ದೇಶಕರು ಮತ್ತು ವಿವಿಧ ಪಂಚಾಯತ್ ಸದಸ್ಯರು ಡಾಕ್ಟರ್ ರಾಜೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ತಾವು ನಿಲ್ಲಬೇಕು ಎನ್ನುವ ಒತ್ತಡ ಹಾಕಿದ್ದಾರೆ ಎನ್ನುವ ಮಾತು ಕೂಡ ಕೇಳಿಬರುತ್ತಿದೆ. ಹಾಗಾಗಿ ಉಭಯ ಜಿಲ್ಲೆಗಳ ಜಿಲ್ಲೆಯಲ್ಲಿ ಡಾಕ್ಟರ್ ರಾಜೇಂದ್ರ ಕುಮಾರ್ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದೇ ಆದಲ್ಲಿ ಅತಿಸುಲಭವಾಗಿ ಈ ಸ್ಥಾನ ರಾಜೇಂದ್ರ ಕುಮಾರ್ ಅವರ ಮುಡಿಗೇರಲಿದೆ.


ಸಹಕಾರಿಗಳ ಒತ್ತಾಸೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ವಿಧಾನಪರಿಷತ್ ಸ್ಥಾನಕ್ಕೆ ಡಾಕ್ಟರ್ ರಾಜೇಂದ್ರ ಕುಮಾರ್ ಸೂಕ್ತ ವ್ಯಕ್ತಿ ಎಂಬುದು ಅವರ ಅಭಿಪ್ರಾಯವಾಗಿದೆ ಕಳೆದ 25 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿಯಾಗುವ ರೀತಿಯಲ್ಲಿ ಸೇವೆ ಸಲ್ಲಿಸಿರುವ ಘಣತೆ ಇವರಿಗಿದೆ ರೈತಾಪಿ ವರ್ಗದ ಜನರಿಗೆ ಗ್ರಾಮೀಣ ಭಾಗದ ಕಡುಬಡವರಿಗೆ ನೇರವಾಗಿ ಬ್ಯಾಂಕ್ ಮುಖಾಂತರ ಆರ್ಥಿಕ ಸಬಲೀಕರಣಕ್ಕೆ ಕಾರಣವಾದವರು ಎಂಎನ್ಆರ್, ಉಭಯ ಜಿಲ್ಲೆಯಲ್ಲಿ ಸಹಕಾರಿಗಳಿಗೆ ಶಕ್ತಿ ತುಂಬಿ ಬೆನ್ನುತಟ್ಟಿದರು ಇವರು ಮಾತ್ರವಲ್ಲದೆ ಎಲ್ಲಾ ರಾಜಕೀಯ ಪಕ್ಷದ ನಾಯಕರು ಕಾರ್ಯಕರ್ತರು ಹಾಗೂ ಸದಸ್ಯರ ಜೊತೆಗೆ ನಿಕಟ ಸಂಪರ್ಕ ಹಾಗೂ ಉತ್ತಮ ಸಂಬಂಧ ಹೊಂದಿರುವ ವ್ಯಕ್ತಿಯಾಗಿರುವುದರಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇ ಆದಲ್ಲಿ ಗೆಲುವು ಎಂಬುದು ಡಾಕ್ಟರ್ ರಾಜೇಂದ್ರ ಕುಮಾರ್ ಅವರ ಪಾಲಿಗೆ ಆಗಲಿದೆ ಎನ್ನುವ ಲೆಕ್ಕಾಚಾರವೂ ಇದೆ ಈಗಾಗಲೇ ರಾಜಕೀಯ ನಾಯಕರು ಮತ್ತು ಪಂಚಾಯತ್ ಸದಸ್ಯರು ಪಂಚಾಯತ್ ಮುಖಂಡರು ರಾಜೇಂದ್ರ ಕುಮಾರ್ ಅವರ ಸಂಪರ್ಕಕ್ಕೆ ಬಂದಿದ್ದು ಪಕ್ಷೇತರವಾಗಿ ವಿಧಾನ ಪರಿಷತ್ ಚುನಾವಣೆ ಸ್ಪರ್ಧಿಸುವಂತೆ ಒತ್ತಡ ಹಾಕುತ್ತಿದ್ದಾರೆ ಎನ್ನುವುದು ಕೇಳಿಬಂದಿದ್ದು ರಾಜೇಂದ್ರ ಕುಮಾರ್ ಅವರ ನಡೆ ಯಾವ ರೀತಿ ಇದೆ ಎಂಬುದನ್ನು ಕಾದು ನೋಡಬೇಕಾಗಿದೆ.

ರಾಷ್ಟ್ರೀಯ ಪಕ್ಷದ ನಾಯಕರಲ್ಲಿ ತಳಮಳ

ಹೌದು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಉಭಯ ಜಿಲ್ಲೆಯಲ್ಲಿ ಸಹಕಾರಿಗಳ ಶಕ್ತಿ ಪ್ರದರ್ಶನ ಹಾಗೂ ಸಹಕಾರಿಗಳೇ ಪಂಚಾಯತ್ ಸದಸ್ಯರಾಗಿರುವುದರಿಂದ ಮತ್ತು ಅತಿ ಹೆಚ್ಚು ಮಹಿಳೆಯರು ಪಂಚಾಯತ್ ಸದಸ್ಯರು ಅದರಲ್ಲಿ ಶೇಕಡಾ 50 ಕ್ಕೂ ಅಧಿಕ ನವೋದಯ ಸ್ವಸಹಾಯ ಸಂಘದ ಸದಸ್ಯರು ಆಗಿರುವುದರಿಂದ ಡಾಕ್ಟರ್ ರಾಜೇಂದ್ರ ಕುಮಾರ್ ಅವರು ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ತಳಮಳ ಉಂಟಾಗಲಿದೆ.

ಒಟ್ಟಾರೆಯಾಗಿ ಈ ಬಾರಿಯ ವಿಧಾನಪರಿಷತ್ ಚುನಾವಣೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೊಸ ಸಂಚಲನವನ್ನೇ ಮೂಡಿಸಿದ್ದು ಎರಡು ರಾಷ್ಟ್ರೀಯ ಪಕ್ಷದಲ್ಲಿ ಈ ಹೊಸ ಬೆಳವಣಿಗೆ ನಿದ್ದೆಗೆಡುವಂತೆ ಮಾಡಿದೆ. ಸದ್ಯ ಇನ್ನು ಕೆಲವೇ ದಿನಗಳಲ್ಲಿ ಅಂತಿಮ ನಿರ್ಧಾರ ಹೊರಬೀಳಲಿದ್ದು ಡಾ. ಎಂ ಎನ್ ರಾಜೇಂದ್ರ ಕುಮಾರ್ ಅವರ ನಿರ್ಧಾರ ಕಾದುನೋಡಬೇಕಾಗಿದೆ.

ಪೊಲಿಟಿಕಲ್ ಬ್ಯರೋ ವಿಶ್ವನ್ಯೂಸ್24 ಮಂಗಳೂರು

 

Vishwa News 24

Recent Posts

ಅ.29ರಿಂದ ನ.11ರವರೆಗೆ ಹಾಸನಾಂಬಾ ಜಾತ್ರಾ ಮಹೋತ್ಸವ – vishwanews24

ಅಕ್ಟೋಬರ್ 29ರಂದು ಗರ್ಭಗುಡಿ ಬಾಗಿಲು ಓಪನ್  12 ದಿನ ದೇವಿಯ ದರ್ಶನಕ್ಕೆ ಅವಕಾಶ ಹಾಸನ: ಈ ಬಾರಿಯ ಪ್ರಸಿದ್ಧ ಹಾಸನಾಂಬಾ…

48 minutes ago

ಶಾರ್ಜಾದಲ್ಲಿ ಹತ್ಯೆಯಾದ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ಭಾರತಕ್ಕೆ ತರಲು ಯತ್ನ: ಕೋಟ ಶ್ರೀನಿವಾಸ ಪೂಜಾರಿ – vishwanews24

ಶಾರ್ಜಾದಲ್ಲಿ ಹತ್ಯೆಯಾದ ಉಡುಪಿ ಮೂಲದ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ಭಾರತಕ್ಕೆ ತರಲು ಯತ್ನ: ಕೋಟ ಶ್ರೀನಿವಾಸ ಪೂಜಾರಿ ಉಡುಪಿ…

1 hour ago

ಗೃಹಲಕ್ಷ್ಮಿ ಯೋಜನೆಗೆ ಹೊಸ ಮಾರ್ಗಸೂಚಿ ಬಿಡುಗಡೆ – vishwanews24

ಗೃಹಲಕ್ಷ್ಮಿ ಯೋಜನೆಗೆ ಹೊಸ ಮಾರ್ಗಸೂಚಿ ಬಿಡುಗಡೆ ಬೆಂಗಳೂರು : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮೀ ಯೋಜನೆ’ಯ ಅರ್ಹ ಫಲಾನುಭವಿಗಳನ್ನು ಗುರುತಿಸಲು…

1 hour ago

ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಕೇರಳ ಮೂಲದ ಬಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು – vishwanews24

ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ಆರೋಪ: ಕೇರಳ ಮೂಲದ ಬಾಲಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ವಿಟ್ಲ: ಕೇರಳ…

1 hour ago

ಉಡುಪಿ : ಮಾದಕ ವಸ್ತು ಮಾರಾಟ ಪ್ರಕರಣ: 9 ಮಂದಿ ಆರೋಪಿಗಳ ಬಂಧನ – vishwanews24

ಉಡುಪಿ : ಮಾದಕ ವಸ್ತು ಮಾರಾಟ ಪ್ರಕರಣ: 9 ಮಂದಿ ಆರೋಪಿಗಳ ಬಂಧನ ಉಡುಪಿ : ಶಿರ್ವ ಮತ್ತು ಉಡುಪಿ…

1 hour ago

ಮಂಗಳೂರು :  ಪೊಲೀಸರ ವಶದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಸೆರೆ – vishwanews24

ಮಂಗಳೂರು :  ಪೊಲೀಸರ ವಶದಿಂದ ಪರಾರಿಯಾಗಿದ್ದ ಕೊಲೆ ಆರೋಪಿ ಸೆರೆ ಮಂಗಳೂರು : ಕೊಲೆ ಪ್ರಕರಣದ ಆರೋಪಿಯೊಬ್ಬ ಪೊಲೀಸರ ವಶದಿಂದ…

2 hours ago