ಡಿಕೆಶಿ ಅವರಿಗೆ ಜಾಮೀನು ಸಿಗದಂತೆ ಮತ್ತು ಇ.ಡಿ. ಕಸ್ಟಡಿಗೆ ಒಪ್ಪಿಸುವಂತೆ ಪ್ರಬಲವಾಗಿ ವಾದ ಮಂಡಿಸಿದ್ದ ವಕೀಲ ಪುತ್ತೂರಿನ ನಟರಾಜ್​ -Vishwanews24

Featured, ದಕ್ಷಿಣ ಕನ್ನಡ, ರಾಜ್ಯ ನ್ಯೂಸ್

ಬೆಂಗಳೂರು:   ಪ್ಭಾವಿ ರಾಜಕಾರಣಿ, ಕಾಂಗ್ರೆಸ್​ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ಅವರಿಗೆ ಜಾಮೀನು ಸಿಗದಂತೆ ಮತ್ತು ಇ.ಡಿ. ಕಸ್ಟಡಿಗೆ ಒಪ್ಪಿಸುವಂತೆ ಪ್ರಬಲವಾಗಿ ವಾದ ಮಂಡಿಸಿದ್ದು, ನಮ್ಮ ರಾಜ್ಯದವರೇ ಆದ ಪುತ್ತೂರಿನ ಕೆ.ಎಂ. ನಟರಾಜ್​.

ಡಿಕೆಶಿಗೆ ಜಾಮೀನು ಮಂಜೂರು ಮಾಡುವಂತೆ ಡಿಕೆಶಿ ಪರ ವಕೀಲರಾದ ಅಭಿಷೇಕ್​ ಮನುಸಿಂಘ್ವಿ ಪ್ರಬಲವಾಗಿ ವಾದಿಸಿದ್ದರು. ಮೊದಲ ಹಂತದಲ್ಲಿ ಯಶಸ್ವಿಯೂ ಆಗಿದ್ದಾರೆ. ಏಕೆಂದರೆ ಡಿಕೆಶಿ ಅವರನ್ನು ಆರ್ಥಿಕ ಅಪರಾಧಗಳ ನ್ಯಾಯಾಲಯ 10 ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸಿತು.

10 ದಿನ ಇ.ಡಿ. ವಶಕ್ಕೆ ಒಪ್ಪಿಸಿದ ನ್ಯಾಯಾಲಯ ಸರ್ಕಾರದ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಆಗಿ ನೇಮಕವಾಗಿರುವ ವಕೀಲ ಕೆ.ಎಂ. ನಟರಾಜ್​ ಅವರು ಪುತ್ತೂರಿನವರು. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ವಿಶೇಷ ಅಭಿಯೋಜಕರಾಗಿದ್ದರು. ನಟರಾಜ್ ಸಮರ್ಥ ವಾದವನ್ನು ಗಮನಿಸಿದ್ದ ಮೋದಿ ಸರ್ಕಾರ ಅಡಿಷನಲ್ ಸಾಲಿಸಿಟರ್ ಜನರಲ್ ದಕ್ಷಿಣ ಭಾರತಕ್ಕೆ ನೇಮಿಸಿತ್ತು. ನಂತರ ಇದೀಗ ಇಡಿ, ಐಟಿ, ಸಿಬಿಐ ಪ್ರಕರಣಗಳಿಗಾಗೆ ಅಡಿಷನಲ್ ಸಾಲಿಸಿಟರ್ ಜನರಲ್ ಸುಪ್ರೀಂಕೋರ್ಟ್ ಆಗಿ ನೇಮಕ ಮಾಡಲಾಗಿದೆ. ಇಡಿ, ಐಟಿ, ಸಿಬಿಐ ಕೇಸುಗಳ ವಾದ ಮಂಡನೆಯಲ್ಲಿ ನಟರಾಜ್ ಪ್ರಬಲ ವಕೀಲರು ಎನಿಸಿಕೊಂಡಿದ್ದಾರೆ. ಇಂದೂ ಕೂಡ ಡಿಕೆಶಿ ಪರ ವಕೀಲರಿಗೆ ಎದುರಾಗಿ ಸಮರ್ಥವಾಗಿ ವಾದ ಮಂಡಿಸಿ ಸೈ ಎನಿಸಿಕೊಂಡಿದ್ದಾರೆ.

2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಚ್ಛ ನ್ಯಾಯಾಲಯದ ವಿಶೇಷ ಅಭಿಯೋಜಕರಾಗಿ ಕಾರ್ಯನಿರ್ವಹಿಸಿದ ಕೆ.ಎಂ ನಟರಾಜ್, ದತ್ತ ಪೀಠ, ಚರ್ಚ್​ಗಳ ಮೇಲಿನ ದಾಳಿ ಸೇರಿದಂತೆ ಹೈ ಟೆನ್ಷನ್​ ಪ್ರಕರಣಗಳಲ್ಲಿ ಸರ್ಕಾರದ ಪರ ವಾದ ಮಂಡಿಸಿದ್ದರು.

ಹೀಗಾಗಿ ಇಂದು ಕೆ.ಎಂ.ನಟರಾಜ್​, ಮಾಜಿ ಸಚಿವ ಹಾಗೂ ಕಾಂಗ್ರೆಸ್​ ಮುಖಂಡ ಡಿ.ಕೆ.ಶಿವಕುಮಾರ್​ ಅವರ ಅಕ್ರಮ ಹಣ ಸಾಗಾಣಿಕೆ ಪ್ರಕರಣದಲ್ಲಿ ಇಡಿ ಇಲಾಖೆಯ ಪರ ವಾದ ಮಂಡಿಸಿದ್ದಾರೆ. ಕೆ.ಎಂ.ನಟರಾಜ್​ ಮಂಡಿಸಿದ ವಾದದ ಪರಿಣಾಮ ಅಜಯ್​ಕುಮಾರ್​ ಕುಹಾರ್​ ನೇತೃತ್ವದ ಏಕಸದಸ್ಯ ಪೀಠ ಶಿವಕುಮಾರ್​ರನ್ನು 9 ದಿನಗಳ ಕಾಲ ಇಡಿ ಅಧಿಕಾರಿಗಳ ಕಸ್ಟಡಿಗೆ ನೀಡಿ ಆದೇಶಿಸಿದೆ.

One thought on “ಡಿಕೆಶಿ ಅವರಿಗೆ ಜಾಮೀನು ಸಿಗದಂತೆ ಮತ್ತು ಇ.ಡಿ. ಕಸ್ಟಡಿಗೆ ಒಪ್ಪಿಸುವಂತೆ ಪ್ರಬಲವಾಗಿ ವಾದ ಮಂಡಿಸಿದ್ದ ವಕೀಲ ಪುತ್ತೂರಿನ ನಟರಾಜ್​ -Vishwanews24

Comments are closed.