ಡೈಮಂಡ್ ಲೀಗ್-2022 : ಮತ್ತೊಂದು ಗೆಲುವು ಸಾಧಿಸುವ ಮೂಲಕ ತನ್ನದೇ ದಾಖಲೆ ಮುರಿದ ನೀರಜ್ ಚೋಪ್ರಾ – Vishwanews24
ಡೈಮಂಡ್ ಲೀಗ್-2022 : ಮತ್ತೊಂದು ಗೆಲುವು ಸಾಧಿಸುವ ಮೂಲಕ ತನ್ನದೇ ದಾಖಲೆ ಮುರಿದ ನೀರಜ್ ಚೋಪ್ರಾ
ಸ್ಟಾಕ್ಹೋಮ್: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಕ್ರೀಡಾತಾರೆ ನೀರಜ್ ಚೋಪ್ರಾ ಸ್ವೀಡನ್‌ನ ಸ್ಟಾಕ್ಹೋಮ್‌ನಲ್ಲಿ ನಡೆದ ಡೈಮಂಡ್ ಲೀಗ್-2022 ನಲ್ಲಿ ಮತ್ತೊಂದು ಗೆಲುವು ಸಾಧಿಸುವ ಮೂಲಕ ತಮ್ಮದೇ ದಾಖಲೆ ಮುರಿದಿದ್ದಾರೆ.
ಡೈಮಂಡ್ ಲೀಗ್‌ನಲ್ಲಿ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ 89.94 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಸಾಧನೆ ಮಾಡಿದ್ದು, ಕಳೆದ ಒಂದು ತಿಂಗಳಿನಲ್ಲಿ 2ನೇ ಬಾರಿ ಅಂತಾರಾಷ್ಟ್ರೀಯ ದಾಖಲೆ ಬರೆದ ಕೀರ್ತಿ ಪಡೆದುಕೊಂಡಿದ್ದಾರೆ. ಮುಖ್ಯವಾಗಿ ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ತಮ್ಮ ಡೈಮಂಡ್ ಲೀಗ್ ಮರಳಿ ಪಡೆದುಕೊಂಡಿದ್ದಾರೆ.
ಚೋಪ್ರಾ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀಟರ್‌ಗಳ ಜಾವೆಲಿನ್ ಎಸೆಯುವ ಮೂಲಕ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಲೀಗ್‌ನಲ್ಲಿ ಒಟ್ಟು 6 ಎಸೆತಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಚೋಪ್ರಾ ಮೊದಲ ಎಸೆತದಲ್ಲಿ 89.94 ಮೀಟರ್, 2ನೇ ಎಸೆತದಲ್ಲಿ 84.37 ಮೀಟರ್, 3ನೇ ಎಸೆತದಲ್ಲಿ 87.46 ಮೀಟರ್, 4ನೇ ಎಸೆತದಲ್ಲಿ 84.77 ಮೀಟರ್, 5ನೇ ಎಸೆತದಲ್ಲಿ 86.67 ಮೀಟರ್, 6ನೇ ಎಸೆತದಲ್ಲಿ 86.84 ಮೀಟರ್ ಎಸೆದಿದ್ದರು. ಆದರೆ ಮೊದಲ ಎಸೆತದಲ್ಲೇ ಪರಾಕ್ರಮ ಮೆರೆದು ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಮಂಗಳೂರು : ಸುಳ್ಯ ತಾಲೂಕಿನಾದ್ಯಂತ ಮತ್ತೆ ಕಂಪಿಸಿದ ಭೂಮಿ – Vishwanews24
