Featured

ಡೈಮಂಡ್ ಲೀಗ್-2022 : ಮತ್ತೊಂದು ಗೆಲುವು ಸಾಧಿಸುವ ಮೂಲಕ ತನ್ನದೇ ದಾಖಲೆ ಮುರಿದ ನೀರಜ್ ಚೋಪ್ರಾ – Vishwanews24

ಡೈಮಂಡ್ ಲೀಗ್-2022 : ಮತ್ತೊಂದು ಗೆಲುವು ಸಾಧಿಸುವ ಮೂಲಕ ತನ್ನದೇ ದಾಖಲೆ ಮುರಿದ ನೀರಜ್ ಚೋಪ್ರಾ

ಸ್ಟಾಕ್ಹೋಮ್: ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಭಾರತದ ಕ್ರೀಡಾತಾರೆ ನೀರಜ್ ಚೋಪ್ರಾ ಸ್ವೀಡನ್‌ನ ಸ್ಟಾಕ್ಹೋಮ್‌ನಲ್ಲಿ ನಡೆದ ಡೈಮಂಡ್ ಲೀಗ್-2022 ನಲ್ಲಿ ಮತ್ತೊಂದು ಗೆಲುವು ಸಾಧಿಸುವ ಮೂಲಕ ತಮ್ಮದೇ ದಾಖಲೆ ಮುರಿದಿದ್ದಾರೆ.

ಡೈಮಂಡ್ ಲೀಗ್‌ನಲ್ಲಿ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲೇ 89.94 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ಸಾಧನೆ ಮಾಡಿದ್ದು, ಕಳೆದ ಒಂದು ತಿಂಗಳಿನಲ್ಲಿ 2ನೇ ಬಾರಿ ಅಂತಾರಾಷ್ಟ್ರೀಯ ದಾಖಲೆ ಬರೆದ ಕೀರ್ತಿ ಪಡೆದುಕೊಂಡಿದ್ದಾರೆ. ಮುಖ್ಯವಾಗಿ ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ತಮ್ಮ ಡೈಮಂಡ್ ಲೀಗ್ ಮರಳಿ ಪಡೆದುಕೊಂಡಿದ್ದಾರೆ.

ಚೋಪ್ರಾ ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ 89.94 ಮೀಟರ್‌ಗಳ ಜಾವೆಲಿನ್ ಎಸೆಯುವ ಮೂಲಕ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಲೀಗ್‌ನಲ್ಲಿ ಒಟ್ಟು 6 ಎಸೆತಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಚೋಪ್ರಾ ಮೊದಲ ಎಸೆತದಲ್ಲಿ 89.94 ಮೀಟರ್, 2ನೇ ಎಸೆತದಲ್ಲಿ 84.37 ಮೀಟರ್, 3ನೇ ಎಸೆತದಲ್ಲಿ 87.46 ಮೀಟರ್, 4ನೇ ಎಸೆತದಲ್ಲಿ 84.77 ಮೀಟರ್, 5ನೇ ಎಸೆತದಲ್ಲಿ 86.67 ಮೀಟರ್, 6ನೇ ಎಸೆತದಲ್ಲಿ 86.84 ಮೀಟರ್ ಎಸೆದಿದ್ದರು. ಆದರೆ ಮೊದಲ ಎಸೆತದಲ್ಲೇ ಪರಾಕ್ರಮ ಮೆರೆದು ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.

Vishwa News 24

Recent Posts

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ – vishwanews24

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…

18 hours ago

ಉಡುಪಿ ನಗರಸಭೆ ಬಾಕಿ ಕಾಮಗಾರಿ ಶೀಘ್ರ ಆರಂಭಕ್ಕೆ ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ – vishwanews24

ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…

19 hours ago

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ – vishwanews24

ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…

19 hours ago

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ – vishwanews24

ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…

19 hours ago

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ – vishwanews24

ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…

19 hours ago

ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ: ಯೋಗಿ ಆದಿತ್ಯನಾಥ್ ಘೋಷಣೆ – vishwanews24

ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…

2 days ago