ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!ಜನವರಿ 26ರವರೆಗೆ ವಿಯೆಟ್ನಾಂನಿಂದ ಹಣ್ಣುಗಳ ಆಮದಿಗೆ ನಿರ್ಬಂಧ..! vishwanews24
ಬೀಜಿಂಗ್: ಮುಂದಿನ ತಿಂಗಳಿಂದ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾ ಆಯೋಜನೆಗೆ ಚೀನಾ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾದ ಡ್ರ್ಯಾಗನ್ ಹಣ್ಣುಗಳಲ್ಲೂ ಕೊರೊನಾ ವೈರಸ್ ಅಂಶ ಇರುವುದು ಪತ್ತೆಯಾಗಿದೆ.
ಈ ಹಣ್ಣುಗಳನ್ನು ಖರೀದಿಸಿದ ಎಲ್ಲಾ ಸೂಪರ್ ಮಾರ್ಕೆಟ್‍ಗಳನ್ನು ಚೀನಾ ಸರ್ಕಾರ ಬಂದ್ ಮಾಡಿಸಿದೆ. ಅಲ್ಲದೆ ಜನವರಿ 26ರವರೆಗೆ ವಿಯೆಟ್ನಾಂನಿಂದ ಹಣ್ಣುಗಳ ಆಮದಿಗೆ ನಿರ್ಬಂಧ ಹೇರಲಾಗಿದೆ. ಈ ಹಣ್ಣು ಖರೀದಿಸಿರುವವರು ಮನೆಯಲ್ಲೇ ಕ್ವಾರಂಟೈನ್ ಆಗುವಂತೆ ಸೂಚಿಸಿಲಾಗಿದೆ.


