ತಮ್ಮ ಪ್ರೀತಿಯ ಮಗಳ ಚಿತ್ರವನ್ನು ಟ್ವಿಟ್ಟರ್‌ ನಲ್ಲಿ ಹಂಚಿಕೊಂಡ ರಾಕಿಂಗ್‌ ಸ್ಟಾರ್‌ ದಂಪತಿ -Vishwanews24

Featured, ರಾಜ್ಯ ನ್ಯೂಸ್, ಸಿನಿಮಾ

ಬೆಂಗಳೂರು: ಸ್ಯಾಂಡಲ್‌ ವುಡ್‌ ನ ರಾಕಿಂಗ್‌ ಸ್ಟಾರ್‌ ಯಶ್‌ ಅವರು ಇಂದು ಮೊದಲ ಬಾರಿಗೆ ತಮ್ಮ ಪುಟ್ಟ ಮಗಳ ಫೊಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೇ 7ರ ಅಕ್ಷಯ ತೃತೀಯದಂದು ನಾವು ನಮ್ಮ ಮಗಳ ಫೋಟೋವನ್ನು ರಿವೀಲ್ ಮಾಡುತ್ತೇವೆ” ಎಂದು ಅಪ್ಪ ಹಾಗೂ ಮಗಳ ಅರ್ಧ ಫೋಟೋ ಹಾಕಿ ಯಶ್‌ ಈ ಮೊದಲು ಹೇಳಿಕೊಂಡಿದ್ದರು.

‘ನನ್ನ ಜಗತ್ತನ್ನು ಆಳುವ ಸಾಮ್ರಾಜ್ಞಿಯನ್ನು ಇವತ್ತು ನಿಮಗೆ ಪರಿಚಯಿಸುತ್ತಿದ್ದೇನೆ’ಎಂಬ ಬರಹದೊಂದಿಗೆ ಈ ಮುದ್ದಾದ ಫೊಟೋವನ್ನು ಯಶ್‌ ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಈಕೆಗಿನ್ನೂ ನಾಮಕರಣ ಆಗಿಲ್ಲದಿರುವ ಕಾರಣ ನೀವು ಬೇಕಾದರೆ ಈಕೆಯನ್ನು ‘ವೈ.ಆರ್‌.’ ಎಂದು ಕರೆಯಬಹುದು ಎಂದೂ ಯಶ್‌ ತಮ್ಮ ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.