ಸುಮಲತ ಗೆಲುವು ಸಾಧಿಸುವುದರ ಜೊತೆಗೆ ಕೇಂದ್ರ ಸಚಿವರಾಗುವುದು ನಿಶ್ಚಿತ , ಹಾಗೆಯೇ ಮೋದಿ ಎರಡನೇ ಬಾರಿ ಪ್ರಧಾನಿ ಹಾಗು ರಾಜ್ಯದಲ್ಲಿ ಬಿ.ಎಸ್.ವೈ ಮತ್ತೆ ಸಿಎಂ ಆಗುವುದು ಖಚಿತ : ಬಸವಾನಂದಸ್ವಾಮಿ ಭವಿಷ್ಯ -Vishwanews24

Featured, ರಾಜ್ಯ ನ್ಯೂಸ್

ಮಂಡ್ಯ, : ಬೀದರ್ ಜಿಲ್ಲೆಯ ಬಸವಕಲ್ಯಾಣದ ಬಸವಧರ್ಮದ ಪ್ರಸಾರಕ ಬಸವಾನಂದಸ್ವಾಮಿ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ  ಗೆಲುವು ಸಾಧಿಸುತ್ತಾರೆ ಅಂತಾ ಭವಿಷ್ಯ ನುಡಿದಿದ್ದಾರೆ.

ಮಂಡ್ಯದಲ್ಲಿ ನಡೆದ ಚುನಾವಣೆ ಇಡೀ ದೇಶದ ಗಮನ ಸೆಳೆದಿದೆ. ಶೇ 80ಕ್ಕಿಂತಲೂ ಹೆಚ್ಚು ಮತದಾನವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಎಲ್ಲಾ ಪಕ್ಷಗಳು ಹಾಗೂ ಸಮುದಾಯದ ಜನರು ಸುಮಲತಾ ಅವರಿಗೆ ಬೆಂಬಲ ನೀಡಿದ್ದಾರೆ. ಸುಮಲತಾ ಪ್ರಬುದ್ಧ ಮಾತುಗಳಿಂದ ಜನರ ಮನಸೂರೆಗೊಂಡಿದ್ದಾರೆ. ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ. ಮಾತೃಹೃದಯಿಯಾದ ಸುಮಲತಾ ಚುನಾವಣೆಯಲ್ಲಿ ಗೆಲ್ಲುವ ಜೊತೆಗೆ ಕೇಂದ್ರ ಸಚಿವೆಯಾಗುವುದು ನಿಶ್ಚಿತ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವಿಶ್ವದಲ್ಲಿ ಭಯೋತ್ಪಾದನೆ ದೊಡ್ಡ ಸಮಸ್ಯೆಯಾಗಿದ್ದು, ಇದನ್ನು ಮಟ್ಟ ಹಾಕಲು ವಿಶ್ವಕ್ಕೆ ಹಾಗೂ ದೇಶದ ರಕ್ಷ ಣೆಗೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗುವ ಅವಶ್ಯಕತೆಯಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗುತ್ತಾರೆ ಎಂದು ತಿಳಿಸಿದರು.