ತಿರುಪತಿ : ತಿರುಮಲ ಶ್ರೀವಾರಿ ದರ್ಶನದ ನಕಲಿ ಟಿಕೆಟ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎರಡು ಗ್ಯಾಂಗ್‌ಗಳ 7 ಜನರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.
ವಿಶೇಷ ದರ್ಶನದ ನಕಲಿ ಟಿಕೆಟ್ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಭಕ್ತರನ್ನು ವಂಚಿಸುತ್ತಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಈ ಆರೋಪದ ಮೇರೆಗೆ ಟಿಟಿಡಿ ಅಧಿಕಾರಿಗಳು ಎರಡು ಗ್ಯಾಂಗ್‌ಗಳ ೭ ಜನರನ್ನು ಸೋಮವಾರ ತಿರುಮಲ ಪೊಲೀಸ್ ಠಾಣೆಯಲ್ಲಿ ಬಂದಿಸಿದ್ದಾರೆ. ಬಂಧಿತರನ್ನು ಎಸ್‌ಪಿಎಫ್ ಕಾನ್ಸ್‌ಟೇಬಲ್ ಎಂ ಕೃಷ್ಣರಾವ್, ತಿರುಮಲ ವಿಶೇಷ ಪ್ರವೇಶ ಕೌಂಟರ್‌ನ ನಾಗೇಂದ್ರ, ಚೆಂಗಾರೆಡ್ಡಿ, ದೇವೇಂದ್ರ ಪ್ರಸಾದ್ ಮತ್ತು ವೆಂಕಟ್ ಲಡ್ಡು ಮಾರಾಟ ಕೌಂಟರ್ ಸಿಬ್ಬಂದಿ ಅರುಣ್ ರಾಜ್, ಟ್ರಾವೆಲ್ ಏಜೆನ್ಸಿ ಸಿಬ್ಬಂದಿ ಬಾಲಾಜಿ ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಮಧ್ಯಪ್ರದೇಶದಿಂದ ಬಂದ ಭಕ್ತರು ಮಧ್ಯವರ್ತಿಯ ಬಳಿ 300 ರೂ. ಮೌಲ್ಯದ ಟಿಕೆಟ್ಗೆ ತಲಾ 3,300 ರೂ. ತೆತ್ತು ಖರೀದಿಸಿ, ದೇವರ ದರ್ಶನಕ್ಕೆ ಮುಂದಾಗಿದ್ದರು. ಪ್ರವೇಶದ್ವಾರದ ಬಳಿ ಭಕ್ತರ ಬಳಿ ಇದ್ದ ಟಿಕೆಟ್ ಪರಿಶೀಲಿಸಿದಾಗ ಅದು ನಕಲಿ ಎಂಬುದು ಸ್ಪಷ್ಟವಾಗಿತ್ತು.
ಹೊಸ ವರ್ಷದಂದು ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಮಧ್ಯಪ್ರದೇಶದಿಂದ ಬಂದಿದ್ದ ಕುಟುಂಬದವರು 300 ರೂ. ಮೌಲ್ಯದ ವಿಶೇಷ ದರ್ಶನದ ಟಿಕೆಟ್ (ಶ್ರೀವಾರಿ ದರ್ಶನದ ನಕಲಿ ಟಿಕೆಟ್) ಅನ್ನು ತಲಾ 7 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಮೊದಲು ಪೇದೆ ಕೃಷ್ಣರಾವ್ ನೇತೃತ್ವದಲ್ಲಿ ನಕಲಿ ಟಿಕೆಟ್ ಮಾರಾಟ ನಡೆಯುತ್ತಿತ್ತು. ಬಳಿಕ ಪ್ರವೇಶ ಕೌಂಟರ್‌ನಲ್ಲಿ ಇರುತ್ತಿದ್ದ ಇದೇ ಗ್ಯಾಂಗ್‌ನ ನಾಗೇಂದ್ರ, ಸ್ಕಾನ್ ಮಾಡದೇ ನಕಲಿ ಟಿಕೆಟ್ ಪಡೆದವರನ್ನು ಒಳಕ್ಕೆ ಬಿಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…
ಕಾಪು: ಇಂದು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಭೇಟಿ ಉಡುಪಿ: ಐದನೇ ವರ್ಷದ ಉಚ್ಚಿಲ ದಸರಾ ಲಲಿತ ಪಂಚಮಿಯ ಸಂಭ್ರಮ…
ಉಡುಪಿ ಉಚ್ಚಿಲ ದಸರಾ: ಅ.17ರಂದು ಮಹಾಲಕ್ಷ್ಮೀ ಬ್ಯಾಂಕ್ ವತಿಯಿಂದ ಚಿತ್ರಕಲೆ ಸ್ಪರ್ಧೆ : ಯಶ್ಪಾಲ್ ಸುವರ್ಣ ಉಡುಪಿ: ಉಚ್ಚಿಲ ಮಹಾಲಕ್ಷ್ಮೀ…
ಕೋಳಿಮರಿ ವಿತರಣೆ: ಉಡುಪಿ ತಾಲೂಕಿನ ಗ್ರಾಮೀಣ ರೈತ ಮಹಿಳೆಯರಿಗೆ ಅರ್ಜಿ ಆಹ್ವಾನ ಉಡುಪಿ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ…