Featured

ತಿರುಪತಿ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಎಚ್ಚರ ! ದರ್ಶನದ ನಕಲಿ ಟಿಕೆಟ್‌ ದುಬಾರಿ ಬೆಲೆಗೆ ಮಾರಾಟ , 7 ಜನರ ಬಂಧನ – Vishwanews24

ತಿರುಪತಿ ಟಿಕೆಟ್‌ ಬುಕ್ಕಿಂಗ್‌ ಮಾಡೋ ಮುನ್ನ ಎಚ್ಚರ ! ದರ್ಶನದ ನಕಲಿ ಟಿಕೆಟ್‌ ದುಬಾರಿ ಬೆಲೆಗೆ ಮಾರಾಟ , 7 ಜನರ ಬಂಧನ – Vishwanews24

ತಿರುಪತಿ : ತಿರುಮಲ ಶ್ರೀವಾರಿ ದರ್ಶನದ ನಕಲಿ ಟಿಕೆಟ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎರಡು ಗ್ಯಾಂಗ್‌ಗಳ 7 ಜನರನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ.

ವಿಶೇಷ ದರ್ಶನದ ನಕಲಿ ಟಿಕೆಟ್​ ಅನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ, ಭಕ್ತರನ್ನು ವಂಚಿಸುತ್ತಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಈ ಆರೋಪದ ಮೇರೆಗೆ ಟಿಟಿಡಿ ಅಧಿಕಾರಿಗಳು ಎರಡು ಗ್ಯಾಂಗ್‌ಗಳ ೭ ಜನರನ್ನು ಸೋಮವಾರ ತಿರುಮಲ ಪೊಲೀಸ್​ ಠಾಣೆಯಲ್ಲಿ ಬಂದಿಸಿದ್ದಾರೆ. ಬಂಧಿತರನ್ನು ಎಸ್‌ಪಿಎಫ್‌ ಕಾನ್ಸ್‌ಟೇಬಲ್‌ ಎಂ ಕೃಷ್ಣರಾವ್‌, ತಿರುಮಲ ವಿಶೇಷ ಪ್ರವೇಶ ಕೌಂಟರ್‌ನ ನಾಗೇಂದ್ರ, ಚೆಂಗಾರೆಡ್ಡಿ, ದೇವೇಂದ್ರ ಪ್ರಸಾದ್‌ ಮತ್ತು ವೆಂಕಟ್‌ ಲಡ್ಡು ಮಾರಾಟ ಕೌಂಟರ್‌ ಸಿಬ್ಬಂದಿ ಅರುಣ್‌ ರಾಜ್‌, ಟ್ರಾವೆಲ್‌ ಏಜೆನ್ಸಿ ಸಿಬ್ಬಂದಿ ಬಾಲಾಜಿ ಎಂದು ಗುರುತಿಸಲಾಗಿದೆ.

ಈ ಆರೋಪಿಗಳು ಮಧ್ಯಪ್ರದೇಶದಿಂದ ಬಂದ ಭಕ್ತರು ಮಧ್ಯವರ್ತಿಯ ಬಳಿ 300 ರೂ. ಮೌಲ್ಯದ ಟಿಕೆಟ್​ಗೆ ತಲಾ 3,300 ರೂ. ತೆತ್ತು ಖರೀದಿಸಿ, ದೇವರ ದರ್ಶನಕ್ಕೆ ಮುಂದಾಗಿದ್ದರು. ಪ್ರವೇಶದ್ವಾರದ ಬಳಿ ಭಕ್ತರ ಬಳಿ ಇದ್ದ ಟಿಕೆಟ್​ ಪರಿಶೀಲಿಸಿದಾಗ ಅದು ನಕಲಿ ಎಂಬುದು ಸ್ಪಷ್ಟವಾಗಿತ್ತು.

ಹೊಸ ವರ್ಷದಂದು ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಮಧ್ಯಪ್ರದೇಶದಿಂದ ಬಂದಿದ್ದ ಕುಟುಂಬದವರು 300 ರೂ. ಮೌಲ್ಯದ ವಿಶೇಷ ದರ್ಶನದ ಟಿಕೆಟ್​ (ಶ್ರೀವಾರಿ ದರ್ಶನದ ನಕಲಿ ಟಿಕೆಟ್‌) ಅನ್ನು ತಲಾ 7 ಸಾವಿರ ರೂ.ಗೆ ಮಾರಾಟ ಮಾಡಿದ್ದರು. ಮೊದಲು ಪೇದೆ ಕೃಷ್ಣರಾವ್‌ ನೇತೃತ್ವದಲ್ಲಿ ನಕಲಿ ಟಿಕೆಟ್‌ ಮಾರಾಟ ನಡೆಯುತ್ತಿತ್ತು. ಬಳಿಕ ಪ್ರವೇಶ ಕೌಂಟರ್‌ನಲ್ಲಿ ಇರುತ್ತಿದ್ದ ಇದೇ ಗ್ಯಾಂಗ್‌ನ ನಾಗೇಂದ್ರ, ಸ್ಕಾನ್‌ ಮಾಡದೇ ನಕಲಿ ಟಿಕೆಟ್‌ ಪಡೆದವರನ್ನು ಒಳಕ್ಕೆ ಬಿಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

Vishwa News 24

Recent Posts

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು – vishwanews24

ಕುಂದಾಪುರ : ತ್ರಾಸಿಯಲ್ಲಿ ರಸ್ತೆ ಅಪಘಾತ: ಮತ್ತೊಬ್ಬ ಸವಾರ ಚಿಕಿತ್ಸೆ ಫಲಕಾರಿಯಾಗದೇ ಮೃತ್ಯು ಕುಂದಾಪುರ: ಎರಡು ದ್ವಿಚಕ್ರ ವಾಹನಗಳ ನಡುವೆ ಸೋಮವಾರ…

4 hours ago

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ – vishwanews24

ಕೃಷಿ ಸಾಲ‌ ಮನ್ನಾ ಮಾಡುವ ಬಗ್ಗೆ ಪರಿಶೀಲನೆ ಮಾಡುವೆ : ಸಿಎಂ ಡಿಕೆಶಿ ಕಲಬುರಗಿ: ಕೃಷಿ ಸಾಲ ಮನ್ನಾ ಮಾಡುವ…

6 hours ago

ಮಂಗಳೂರು: ಯುವತಿ ನಾಪತ್ತೆ ; ಪೋಲಿಸರಿಂದ ಪತ್ತೆಗೆ ಮನವಿ – vishwanews24

ಮಂಗಳೂರು: ಯುವತಿ ನಾಪತ್ತೆ: ಪೋಲಿಸರಿಂದ ಪತ್ತೆಗೆ ಮನವಿ ಮಂಗಳೂರು: ಉರ್ವ ಅಶೋಕ ನಗರದ ಮೆಡ್ ಕ್ವಿಸ್ಟ್ ಲ್ಯಾಬ್ನಲ್ಲಿ ಲ್ಯಾಬ್ ಟೆಕ್ನಿಷಿಯನ್…

6 hours ago

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ – vishwanews24

ಕಟಪಾಡಿಯಿಂದ ಕಳವಾದ ಆಟೋರಿಕ್ಷಾ ಬೆಳ್ತಂಗಡಿಯಲ್ಲಿ ಪತ್ತೆ ಬೆಳ್ತಂಗಡಿ : ಕಟಪಾಡಿಯಿಂದ ಕಳವಾದ ಆಟೋರಿಕ್ಷಾವೊಂದು ಸೋಮವಾರ ಬೆಳ್ತಂಗಡಿ ಪಟ್ಟಣದ ಮೂರು ಮಾರ್ಗದಲ್ಲಿ…

7 hours ago

ಮುಂಬೈ : ಭಾರೀ ಮಳೆ – ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು – vishwanews24

ಮುಂಬೈ : ಭಾರೀ ಮಳೆ - ಸಂಪೂರ್ಣ ಅಸ್ತವ್ಯಸ್ತ ; 43 ರೈಲು ಸಂಚಾರ ರದ್ದು ಮುಂಬೈ: ಕಳೆದ ಮೂರು…

7 hours ago

ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ – ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ- vishwanews24

ಬೆಳ್ತಂಗಡಿ: ಭಾರೀ ಮಳೆಯ ಹಿನ್ನೆಲೆ - ಜು. 8ರಿಂದ ಗಡಾಯಿಕಲ್ಲು ಚಾರಣ ನಿಷೇಧ ಬೆಳ್ತಂಗಡಿ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ…

7 hours ago