ತೇಜಸ್ ಲಘು ಯುದ್ಧ ವಿಮಾನದ ಹಾರಾಟದಲ್ಲಿ ಪಾಲ್ಗೊಂಡು ವಿಶೇಷ ಗಮನ ಸೆಳೆದ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ -Vishwanews24
ಬೆಂಗಳೂರು: ಭಾರತೀಯ ವಾಯು ಪಡೆಯ ಅತ್ಯಂತ ಸಮರ್ಥ ಲಘು ಯುದ್ಧ ವಿಮಾನ-ತೇಜಸ್‍ನಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಸಹ ಪೈಲೆಟ್ ಆಗಿ ಹಾರಾಟ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ರಕ್ಷಣಾ ಸಚಿವರು ಪೈಲೆಟ್ ಸಮವಸ್ತ್ರದೊಂದಿಗೆ ತೇಜಸ್ ಲಘು ಯುದ್ಧ ವಿಮಾನದ ಹಾರಾಟದಲ್ಲಿ ಪಾಲ್ಗೊಂಡು ವಿಶೇಷ ಗಮನ ಸೆಳೆದರು.
ಗುರುವಾರ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ಅವರು, ಯುದ್ದ ವಿಮಾನದ ಪೈಲಟ್ ಉಡುಗೆಯಲ್ಲಿ ತೇಜಸ್ ನ ಕೋ ಪೈಲಟ್ ಏರ್ ವೈಸ್ ಮಾರ್ಷಲ್ ಎನ್ ತಿವಾರಿ ಜೊತೆ ಕುಳಿತು ಸಂತಸದಿಂದ ಕೈ ಬೀಸಿ, ಬೆಳಗ್ಗೆ 9 ರಿಂದ 9:30 ರ ತನಕ ಅರ್ಧ ಗಂಟೆಗಳ ಕಾಲ ಆಕಾಶದಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಕೂತು ಹಾರಾಟ ನಡೆಸಿದರು.
ಏರೋ ನಾಟಿಕಲ್ ಡೆವಲಪ್‍ಮೆಂಟ್ ಅಥಾರಟಿಯ ರಾಷ್ಟ್ರೀಯ ವಿಮಾನ ಹಾರಾಟ ಪರೀಕ್ಷಾ ವಿಭಾಗದ ನಿರ್ದೇಶಕರೂ ಆಗಿರುವ ಏರ್‍ವೈಸ್ ಮಾರ್ಷಲ್ ಎನ್.ತಿವಾರಿ ಅವರೊಂದಿಗೆ ಕೋ ಪೈಲೆಟ್ ಆಗಿ ರಾಜನಾಥ ಸಿಂಗ್ ತೇಜಸ್ ಲಘು ಪೈಟರ್‍ಜೆಟ್‍ನಲ್ಲಿ ಹಾರಾಟ ನಡೆಸಿ ಯುದ್ಧ ವಿಮಾನಗಳ ವಾಯು ಯಾನದಲ್ಲಿ ಪಾಲ್ಗೊಂಡ ಕೆಲವೇ ರಕ್ಷಣಾ ಸಚಿವರ ಸಾಲಿಗೆ ಸಿಂಗ್ ಸೇರ್ಪಡೆಯಾದರು.
