ದಸರಾ ಸಂಭ್ರಮಕ್ಕೆ KSRTC ವಿಶೇಷ ಟೂರ್ ಪ್ಯಾಕೇಜ್: ಅ.11ರಿಂದ 20ರವರೆಗೆ ಮಂಗಳೂರಿನಿಂದ ವಿಶೇಷ ಬಸ್ ಸೇವೆ – vishwanews24
ಅ.11 ರಿಂದ 20ರವರೆಗೆ ಮಂಗಳೂರು-ಉಡುಪಿ ಕೆಎಸ್ಆರ್ಟಿಸಿಯಿಂದ ದಸರಾ ಸ್ಪೆಷಲ್ ಟೂರ್ ಪ್ಯಾಕೇಜ್
ಮಂಗಳೂರು: ನವರಾತ್ರಿ ಹಾಗೂ ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕರಾವಳಿ ಮತ್ತು ಮಲೆನಾಡಿನ ಪ್ರಮುಖ ಧಾರ್ಮಿಕ, ಪ್ರವಾಸಿ ಕ್ಷೇತ್ರಗಳನ್ನು ಸಂದರ್ಶಿಸಲು ಕೆಎಸ್ಆರ್ಟಿಸಿ (KSRTC) ಮಂಗಳೂರಿನಿಂದ ವಿವಿಧ ವಿಶೇಷ ‘ದಸರಾ ಟೂರ್ ಪ್ಯಾಕೇಜ್’ ಬಸ್ ಸೇವೆಗಳನ್ನು ಘೋಷಿಸಿದೆ. ಭಕ್ತಾದಿಗಳು ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ಕೈಗೆಟುಕುವ ದರದಲ್ಲಿ ಹಲವು ಪ್ಯಾಕೇಜ್ಗಳನ್ನು ರೂಪಿಸಲಾಗಿದೆ.
ಈ ವಿಶೇಷ ಬಸ್ ಸೇವೆಗಳು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಪ್ರತಿದಿನ ಲಭ್ಯವಿರಲಿವೆ.
ಮಂಗಳೂರು ದಸರಾ ನವದುರ್ಗಾ ದರ್ಶನ
ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಮಂಗಳೂರಿನಿಂದ ಹೊರಡುವ ಬಸ್ ಮರೋಳಿ ಸೂರ್ಯನಾರಾಯಣ ದೇವಸ್ಥಾನ, ಬೋಳಾರ ಮಾರಿಯಮ್ಮ ದೇವಸ್ಥಾನ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಹೊಸನಾಡು ಕೊಡ್ಯಡ್ಕ ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಬಪ್ಪನಾಡು ದುರ್ಗಾಪರಮೇಶ್ವರಿ, ಸಸಿಹಿತ್ತು ಭಗವತಿ, ಚಿತ್ರಾಪುರ ದುರ್ಗಾಪರಮೇಶ್ವರಿ, ಉರ್ವ ಮಾರಿಯಮ್ಮ ಹಾಗೂ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಗಳಿಗೆ ತೆರಳಿ ರಾತ್ರಿ 8.30ಕ್ಕೆ ಮಂಗಳೂರಿಗೆ ವಾಪಸ್ ಆಗಲಿದೆ. ವಯಸ್ಕರಿಗೆ Rs 500 ದರ ನಿಗದಿಪಡಿಸಲಾಗಿದೆ.
ಅ.11ರಿಂದ ಉಚ್ಚಿಲ ದಸರಾ ವೈಭವ : ಚಿನ್ನದ ಹೊಳಪಿನಲ್ಲಿ ಕಂಗೊಳಿಸಲಿದೆ ದಸರಾ ದರ್ಬಾರ್ ಮಂಟಪ – vishwanews24
ಮಂಗಳೂರು-ತಲಕಾವೇರಿ-ಭಾಗಮಂಡಲ
ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಆರಂಭವಾಗುವ ಈ ಪ್ರವಾಸದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ತಲಕಾವೇರಿ, ಭಗಂಡೇಶ್ವರ ದೇವಸ್ಥಾನ, ತ್ರಿವೇಣಿ ಸಂಗಮ, ಅಬ್ಬಿ ಜಲಪಾತ ಹಾಗೂ ರಾಜಾಸೀಟ್ಗೆ ಭೇಟಿ ನೀಡಲಾಗುತ್ತದೆ. ರಾತ್ರಿ 9.30ಕ್ಕೆ ಮಂಗಳೂರಿಗೆ ಮರಳಲಿದೆ. ವಯಸ್ಕರಿಗೆ Rs 600 ದರ ನಿಗದಿಪಡಿಸಲಾಗಿದೆ.
ಮಂಗಳೂರು-ಕೊಲ್ಲೂರು
ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ಬಸ್ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಕಾಪು ಮಾರಿಯಮ್ಮ, ಮಂದಾರ್ತಿ ದುರ್ಗಾಪರಮೇಶ್ವರಿ, ಕಮಲಶಿಲೆ ಬ್ರಾಹ್ಮ ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕಾ ಹಾಗೂ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನಗಳಿಗೆ ತೆರಳಲಿದೆ. ರಾತ್ರಿ 8ಕ್ಕೆ ಮಂಗಳೂರಿಗೆ ವಾಪಸ್ ಆಗಲಿದೆ. ವಯಸ್ಕರಿಗೆ Rs 600 ದರ ನಿಗದಿಪಡಿಸಲಾಗಿದೆ.
ಮಂಗಳೂರು-ಸಿಗಂದೂರು
ಮಂಗಳೂರಿನಿಂದ ಬೆಳಗ್ಗೆ 7 ಗಂಟೆಗೆ ಹೊರಡುವ ಬಸ್ ಕುಂದಾಪುರ, ಸಿಗಂದೂರು ಚೌಡೇಶ್ವರಿ ದೇವಸ್ಥಾನ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಿಗೆ ತೆರಳಿ ಸಂಜೆ 7.30ಕ್ಕೆ ಮಂಗಳೂರಿಗೆ ಮರಳಲಿದೆ. ವಯಸ್ಕರಿಗೆ Rs 700 ದರ ನಿಗದಿಪಡಿಸಲಾಗಿದೆ.
ಪಣಂಬೂರು ಬೀಚ್ನಲ್ಲಿ ನಾಪತ್ತೆಯಾಗಿದ್ದ ಬಾಲಕನ ಮೃತದೇಹ ಹೆಜಮಾಡಿ ಕೋಡಿಯಲ್ಲಿ ಪತ್ತೆ – vishwanews24
ಮಂಗಳೂರು-ಶೃಂಗೇರಿ ದಸರಾ ಪ್ಯಾಕೇಜ್
ಮಂಗಳೂರಿನಿಂದ ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಈ ಪ್ರವಾಸದಲ್ಲಿ ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶಾರದಾಂಬಾ ದೇವಸ್ಥಾನ, ಹರಿಹರಪುರ ಮಠ, ಋಷ್ಯಶೃಂಗೇಶ್ವರ ದೇವಸ್ಥಾನ ಹಾಗೂ ಕಿಗ್ಗಾ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಭೇಟಿ ನೀಡಲಾಗುತ್ತದೆ. ಸಂಜೆ 7.30ಕ್ಕೆ ಮಂಗಳೂರಿಗೆ ವಾಪಸ್ ಆಗಲಿದೆ. ವಯಸ್ಕರಿಗೆ Rs 600 ದರ ನಿಗದಿಪಡಿಸಲಾಗಿದೆ.
ಉಡುಪಿ -ಕೊಲ್ಲೂರು
ಉಡುಪಿಯಿಂದ ಬೆಳಗ್ಗೆ 7.30 ಗಂಟೆಗೆ ಹೊರಡುವ ಬಸ್, ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನ,ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,ಕಮಲಶಿಲೆ ಶ್ರೀ ಬ್ರಾಹ್ಮ ದುರ್ಗಾಪರಮೇಶ್ವರಿ ದೇವಸ್ಥಾನ,ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,ಕೊಲ್ಲೂರು-ಶ್ರೀ ಮೂಕಾಂಬಿಕಾ ದೇವಸ್ಥಾನ – ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನ.ವಯಸ್ಕರಿಗೆ Rs 500 ದರ ನಿಗದಿಪಡಿಸಲಾಗಿದೆ.
ಉಡುಪಿ -ಶೃಂಗೇರಿ
ಉಡುಪಿಯಿಂದ ಬೆಳಗ್ಗೆ 7.30 ಗಂಟೆಗೆ ಹೊರಡುವ ಬಸ್,ಶ್ರೀ ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಶೃಂಗೇರಿ ಶ್ರೀ ಶಾರದಾಂಬಾ ದೇವಸ್ಥಾನ, ಋಷ್ಯಶೃಂಗೇಶ್ವರ ದೇವಸ್ಥಾನ ಹರಿಹರಪುರ ಮಠ, ಶ್ರೀ ಅನಂತಪದ್ಮನಾಭ ದೇವಸ್ಥಾನ, ಪೆರ್ಡೂರು.ವಯಸ್ಕರಿಗೆ Rs 500 ದರ ನಿಗದಿಪಡಿಸಲಾಗಿದೆ.
ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ ಮೋದಿ : ದೇಶಾದ್ಯಂತ ‘ಸೇವಾ ಸಂಕಲ್ಪʼ ಅಭಿಯಾನ – vishwanews24
