ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್ ಹಾಗೂ ಪವಿತ್ರಾ – Vishwanews24
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್ ಹಾಗೂ ಪವಿತ್ರಾ
ತೆಲುಗು ನಟ ನರೇಶ್ ಹಾಗೂ ಕನ್ನಡದ ನಟಿ ಪವಿತ್ರಾ ಲೋಕೇಶ್ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಇಬ್ಬರೂ ಕಲಾವಿದರು ಮದುವೆಯಾಗಿರುವ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಜೀವನ ಪರ್ಯಂತ ಖುಷಿಯಾಗಿರಲು ಶುಭ ಹಾರೈಸಿ ಎಂದು ಕೇಳಿಕೊಂಡಿದ್ದಾರೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಕೂಡ ಮಾಡಿದ್ದಾರೆ.
ನರೇಶ್ ಹಂಚಿಕೊಂಡಿರುವ ಮದುವೆ ವಿಡಿಯೋಗೆ ಅನೇಕರು ಶುಭಾಶಯ ತಿಳಿಸಿದ್ದಾರೆ. ಈ ಮದುವೆಗೆ ಆಪ್ತರು, ಸ್ನೇಹಿತರು, ಕುಟುಂಬ ಸದಸ್ಯರು ಮಾತ್ರ ಭಾಗಿಯಾಗಿದ್ದರು.

