ದಿಲ್ಲಿ ಸ್ಫೋಟ : ಉಡುಪಿ ಜಿಲ್ಲೆಯಲ್ಲಿ ಅಲರ್ಟ್ ; ಪೊಲೀಸ್ ವರಿಷ್ಠಾಧಿಕಾರಿ ಸೂಚನೆ – vishwanews24
ದಿಲ್ಲಿ ಸ್ಫೋಟ : ಉಡುಪಿ ಜಿಲ್ಲೆಯಲ್ಲಿ ಅಲರ್ಟ್ : ಪೊಲೀಸ್ ವರಿಷ್ಠಾಧಿಕಾರಿ ಸೂಚನೆ
ಉಡುಪಿ: ಹೊಸದಿಲ್ಲಿಯಲ್ಲಿ ಸ್ಫೋಟ ನಡೆದಿದ್ದು, ಆ ಹಿನ್ನೆಲೆಯಲ್ಲಿ ಪೊಲೀಸ್ ಮಹಾನಿರ್ದೇಶಕರ ಸೂಚನೆಯ ಮೇರೆಗೆ ಜಿಲ್ಲೆಯಲ್ಲಿಯೂ ಅಲರ್ಟ್ ಆಗಿರುವಂತೆ ಸೂಚನೆ ನೀಡಲಾಗಿದೆ.
ದಿನಂಪ್ರತಿ ತಪಾಸಣೆ ಮಾತ್ರವಲ್ಲದೆ ಆಯ್ದ ಭಾಗದಲ್ಲಿ ಎಚ್ಚರದಿಂದ ಇರುವಂತೆ ಪೊಲೀಸರಿಗೆ ಸೂಚನೆ ಲಭಿಸಿದ್ದು, ಆ ನಿಮಿತ್ತ ನಗರದ ಧಾರ್ಮಿಕ ಕ್ಷೇತ್ರಗಳು ಸಹಿತ ಪ್ರವಾಸಿ ತಾಣಗಳ ಮೇಲೆ ವಿಶೇಷ ನಿಗಾ ಇರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.’
ಡಾ .ಎಂ ಏನ್ ರಾಜೇಂದ್ರ ಕುಮಾರ್ ಅವರಿಂದ ಕಾರ್ಕಳ ಬಾಹುಬಲಿ ಬೆಟ್ಟಕ್ಕೆ ಶಾಶ್ವತ ದಾರಿದೀಪ ಅಳವಡಿಕೆ – vishwanews24
ಜಿಲ್ಲೆಯ ಪ್ರಮುಖ ದೇವಸ್ಥಾನ, ಬೀಚ್, ಧಾರ್ಮಿಕ ಕೇಂದ್ರಗಳು ಸಹಿತವಾಗಿ ಜನದಟ್ಟಣೆ ಹೆಚ್ಚಿರುವ, ಪ್ರವಾಸಿಗರು ಹೆಚ್ಚು ಸೇರುವ ಕಡೆಗಳಲ್ಲಿ ವಿಶೇಷ ಭದ್ರತೆ, ನಿಗಾ ವ್ಯವಸ್ಥೆ ಹಾಗೂ ಪರಿಶೀಲನೆ ಇತ್ಯಾದಿ ಹೆಚ್ಚಿಸಲಿದ್ದೇವೆ ಎಂಬ ಮಾಹಿತಿ ನೀಡಿದರು.
