ದಿವ್ಯಾ ಹಾಗರಗಿ ಹಾಗೂ ಡಿ.ಕೆ ಶಿ ಫೋಟೋ ವೈರಲ್ ; ನನಗೂ ನೋಟೀಸ್ ಕೊಡಲಿ, ನನ್ನನ್ನು ವಿಚಾರಣೆಗೆ ಕರೆಯಲಿ : ಡಿ.ಕೆ.ಶಿ – Vishwnaews24
ದಿವ್ಯಾ ಹಾಗರಗಿ ಹಾಗೂ ಡಿ.ಕೆ ಶಿ ಫೋಟೋ ವೈರಲ್ ; ನನಗೂ ನೋಟೀಸ್ ಕೊಡಲಿ, ನನ್ನನ್ನು ವಿಚಾರಣೆಗೆ ಕರೆಯಲಿ : ಡಿ.ಕೆ.ಶಿ
ಬೆಂಗಳೂರು: ಆರೋಪಿ ದಿವ್ಯಾ ಹಾಗರಗಿ ಡಿ.ಕೆ ಶಿವಕುಮಾರ್ ಜೊತೆ ಮಾತನಾಡುತ್ತಿರುವ ಫೋಟೋ ವೈರಲ್ ಆಗುವುದ್ದಕ್ಕೆ ನನಗೂ ನೋಟಿಸ್ ಕೊಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ನನಗೂ ನೋಟೀಸ್ ಕೊಡಲಿ, ನನ್ನನ್ನು ವಿಚಾರಣೆಗೆ ಕರೆಯಲಿ ನನಗೂ ಈಗ ಆ ಫೋಟೋ ಬಗ್ಗೆ ಹೇಳಿದ್ರು. ನೂರಾರು ಜನ ಬಂದು ನನ್ನ ಭೇಟಿ ಮಾಡ್ತಾರೆ. ನಾನು ಮಂತ್ರಿಯಾಗಿದ್ದವನು. ಮಂತ್ರಿ ಆಗಿದ್ದಾಗ ದಿವ್ಯಾ ಹಾಗರಗಿ ಯಾವುದೋ ಡೆಲಿಗೇಶನ್ ಕರೆ ತಂದಿದ್ದರು ಮಾತನಾಡಿ ಹೋಗಿದ್ದರು ಎಂದರು.
ಡಿಕೆ ಶಿ ಜತೆಗಿನ ದಿವ್ಯಾ ಹಾಗರಗಿ ಫೋಟೋ ವೈರಲ್ ; ಕಾಂಗ್ರೆಸ್ ವಿರುದ್ಧ ಬಿಜೆಪಿ ಟ್ವೀಟ್ – Vishwanews24
ಬಿಜೆಪಿಯವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಮತನಾಡುತ್ತಾ ಇರಬೇಕು.ನನ್ನ ಹೆಸರು ಬರಬೇಕಲ್ಲ. ಓಡಾಡ್ತಿರುತ್ತೆ ಓಡುವಷ್ಟು ದಿನ ಓಡಲಿ ಎಂದಿದ್ದಾರೆ ಎಂದು ಹೇಳಿದರು.
ವಿಶೇಷ ನಿಯಂತ್ರಣ ಅಭಿಯಾನ ನಡೆಸಿ, ಡೆಂಗ್ಯೂ ನಿಯಂತ್ರಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. – Vishwanews24
