ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು
ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿ ಎಸಿ ಕೈಕೊಟ್ಟ ಪರಿಣಾಮ ಪ್ರಯಾಣಿಕರು ಉಸಿರಾಡೋಕೂ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಮಂಗಳವಾರ (ಆ.12) ರಾತ್ರಿ 9:30ರ ಸುಮಾರಿಗೆ ಸ್ಪೈಸ್ಜೆಟ್ನ ಎಸ್ಜಿ-105 ವಿಮಾನವು ದೆಹಲಿಗೆ ಪುಣೆಗೆ ತೆರಳಬೇಕಿತ್ತು, ಆದರೆ ತಡವಾಗಿ 11:30ರ ಸುಮಾರಿಗೆ ಹೊರಡಲು ಸಿದ್ಧವಾಗಿತ್ತು. ವಿಮಾನದೊಳಗೆ ಎಸಿ ಆನ್ ಆಗಿರಲಿಲ್ಲ. ವಿಮಾನ ಟೇಕ್ ಆಫ್ ಆದ ಬಳಿಕವು ಎಸಿ ಆನ್ ಆಗಿರಲಿಲ್ಲ. ಇದರಿಂದ ವಿಮಾನದೊಳಗೆ ಉಸಿರಾಡೋಕೆ ಸಮಸ್ಯೆ ಎದುರಾಯಿತು. ಕೆಲವರಿಗೆ ಮೈ ತುಂಬಾ ಬೆವರು ಬಂದು, ಇನ್ನೇನು ಕುಸಿದು ಬೀಳುತ್ತೇವೆ ಎನ್ನಿಸುತ್ತಿತ್ತು. ಅಲ್ಲದೇ ಗರ್ಭಿಣಿಯರು ಸೇರಿ ಹಲವರು ಅಸ್ವಸ್ಥರಾಗಲು ಪ್ರಾರಂಭಿಸಿದರು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:
ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ದಾಳಿ ಮಾಡಿಸಿದ್ದು ನಾನೇ : ಪ್ರಿಯಾಂಕ್ ಖರ್ಗೆ – vishwanews24
ಇದರಿಂದ ಸಮಸ್ಯೆ ಎದುರಿಸಿದ ಪ್ರಯಾಣಿಕರು, ಡೋರ್ ಓಪನ್ ಮಾಡಿ, ಎಸಿ ಆನ್ ಮಾಡುವಂತೆ ತಿಳಿಸಿದರೂ ಸುಮ್ಮನಿರಿ ಎಂದು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಕೊನೆಗೆ ಅಲ್ಲಿದ್ದವರೆಲ್ಲ ವಿಮಾನದ ಬಾಗಿಲು ತೆರೆಯುವಂತೆ ಸಿಬ್ಬಂದಿಯನ್ನು ಆಗ್ರಹಿಸಿದರು. ಅಲ್ಲಿಂದ ವಿಮಾನವನ್ನು ನೇರವಾಗಿ ಬೇಗೆ ತಿರುಗಿಸಲಾಯಿತು. ಕೂಡಲೇ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು, ಅಸ್ವಸ್ಥಗೊಂಡ ಮಹಿಳೆಯರು ಹಾಗೂ ಗರ್ಭಿಣಿಯರಿಗಾಗಿ ವೀಲ್ ಚೇರ್ ವ್ಯವಸ್ಥೆ ಮಾಡಿ, ಟರ್ಮಿನಲ್ ಕಡೆಗೆ ಕರೆದೊಯ್ದರು.
ನಂತರ ಬೇರೊಂದು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದ್ದು, ಆ ವಿಮಾನವು ಇಂದು (ಆ.12) ಬೆಳಿಗ್ಗೆ 5:30ರ ಸುಮಾರಿಗೆ ದೆಹಲಿಯಿಂದ ಹೊರಟು 7 ಗಂಟೆಗೆ ಪುಣೆಯನ್ನು ತಲುಪಿದೆ ಎಂದು ಸ್ಪೈಸ್ಜೆಟ್ ವಕ್ತಾರರು ಈ ಬಗ್ಗೆ ಪ್ರಯಾಣಿಕರಿಗೆ ಕ್ಷಮೆಯಾಚಿಸಿದ್ದಾರೆ
ರಾಜ್ಯಾದ್ಯಂತ 1 ವರ್ಷ ಗುಟ್ಕಾ, ಪಾನ್ ಮಸಾಲಾ ಮಾರಾಟ ನಿಷೇಧ – vishwanews24
