ದೇಶೀಯ ಕಂಪೆನಿಗಳ ಕಾರ್ಪೋರೇಟ್ ​ ತೆರಿಗೆಯನ್ನು ಇಳಿಸಿದ ಕೇಂದ್ರ ಸರ್ಕಾರ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಶುಕ್ರವಾರ ದೇಶೀಯ ಕಂಪೆನಿಗಳ ಮೇಲೆ ಎಲ್ಲಾ ಸೆಸ್ ಮತ್ತು ಹೆಚ್ಚುವರಿ ಶುಲ್ಕ ಒಳಗೊಂಡಂತೆ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 25.17ಕ್ಕೆ ಇಳಿಸಿದೆ.

ಗೋವಾದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಈ ಘೋಷಣೆ ಮಾಡಿದರು. ಕಾರ್ಪೋರೇಟ್​ ತೆರಿಗೆಗಳನ್ನು ಕಡಿತಗೊಳಿಸುವ ಸುಗ್ರಿವಾಜ್ಞೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಹೇಳಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ದೇಶೀಯ ಕಂಪನಿಗಳ ಕಾರ್ಪೋರೇಟ್ ತೆರಿಗೆಯನ್ನು ಸ್ವಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿರುವುದಾಗಿ ತಿಳಿಸಿದರು. ಅಲ್ಲದೇ ಇದು ಸ್ಥಳೀಯ ನೂತನ ಉತ್ಪಾದನಾ ಕಂಪನಿಗಳಿಗೆ ಅನ್ವಯವಾಗಲಿದೆ ಎಂದು ಹೇಳಿದರು.

ಪ್ರಸಕ್ತ ಹಣಕಾಸು ವರ್ಷ ಏಪ್ರಿಲ್ 1ರಿಂದ ಹೊಸ ತೆರಿಗೆ ದರ ಅನ್ವಯವಾಗಲಿದೆ ದೇಶೀಯ ಕಂಪೆನಿಗಳಿಗೆ ಅನ್ವಯವಾಗಲಿದೆ ಎಂದು ವಿತ್ತಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕಾರ್ಪೊರೇಟ್ ತೆರಿಗೆ ಕಡಿತ ಮತ್ತು ಇತರ ಪರಿಹಾರ ಕ್ರಮಗಳಿಂದ ವಾರ್ಷಿಕವಾಗಿ 1.45 ಲಕ್ಷ ಕೋಟಿ ರೂಪಾಯಿ ಹಣ ಸಂಗ್ರಹವಾಗಲಿದ್ದು ಇದರಿಂದ ಕಂಪೆನಿಗಳ ಹೂಡಿಕೆ ಮತ್ತು ಬೆಳವಣಿಗೆಗೆ ಅನುಕೂಲವಾಗಲಿದೆ ಎಂದರು.

ಕೇಂದ್ರ ಸರ್ಕಾರದ ಕಾರ್ಪೊರೇಟ್ ತೆರಿಗೆ ಕಡಿತದಿಂದಾಗಿ ದೇಶೀಯ ಕಂಪೆನಿಗಳು ಯಾವುದೇ ಪ್ರೋತ್ಸಾಹ ಧನ ಅಥವಾ ರಿಯಾಯಿತಿ ಪಡೆದಿರದಿದ್ದರೆ ಶೇಕಡಾ 22ರಷ್ಟು ಕಾರ್ಪೋರೇಟ್ ತೆರಿಗೆ ಕಟ್ಟಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಮತ್ತು ಹಣಕಾಸು ಕಾಯ್ದೆಯಲ್ಲಿನ ಬದಲಾವಣೆಯನ್ನು ಸರ್ಕಾರ ವಿಧೇಯಕ ಮೂಲಕ ತರಲಿದೆ.

ಕಾರ್ಪೋರೇಟ್ ಕಂಪನಿಗಳಿಗೆ ನೀಡಲಿರುವ ತೆರಿಗೆ ಕಡಿತ ಹಾಗೂ ಇತರ ವಿನಾಯ್ತಿಯಿಂದ ವಾರ್ಷಿಕ ಸುಮಾರು 1,45,000 ಕೋಟಿ ನಷ್ಟವಾಗಲಿದೆ ಎಂದು