ದ.ಕ, ಉಡುಪಿಯಲ್ಲಿ 10 ದಿನ ಭಾರೀ ಮಳೆ ಸಾಧ್ಯತೆ – ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ – Vishwanews24
ಮಂಗಳೂರು: ದ.ಕ, ಉಡುಪಿಯಲ್ಲಿ 10 ದಿನ ಭಾರೀ ಮಳೆ ಸಾಧ್ಯತೆ – ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಮಂಗಳೂರು/ಉಡುಪಿ : ಮುಂಗಾರು ಬಿರುಸು ಪಡೆದುಕೊಂಡಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನ 10 ದಿನ ಭಾರೀ ಮಳೆ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮುನ್ನೆಚ್ಚರಿಕೆ ನೀಡಿದೆ.
ಮಂಗಳೂರು ನಗರದಲ್ಲಿ ಮೋಡದಿಂದ ಕೂಡಿದ ವಾತಾವರಣ ಇತ್ತು. ಜಿಲ್ಲೆಯಾದ್ಯಂತ ಬಿಟ್ಟು ಬಿಟ್ಟು ಮಳೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಬುಧವಾರ ಕೆಲವೆಡೆ ಉತ್ತಮ ಮಳೆಯಾಗಿದ್ದು, ಕಾಪು, ಹೆಬ್ರಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಶಂಕರನಾರಾಯಣ, ಕಾಪು, ಬೆಳ್ಮಣ್, ಅಜೆಕಾರು, ಕುಂದಾಪುರ, ಪರ್ಕಳ, ಸಿದ್ದಾಪುರ, ಪಡುಬಿದ್ರಿ, ಬೈಂದೂರು, ಮಲ್ಪೆ, ಮಣಿಪಾಲ ಭಾಗದಲ್ಲಿ ಬಿಟ್ಟುಬಿಟ್ಟು ಮಳೆ ಸುರಿದಿದೆ.
ಜುಲೈ 2ರಿಂದ ಮಳೆ ಮತ್ತಷ್ಟು ಬಿರುಸು ಪಡೆಯುವ ನಿರೀಕ್ಷೆ ಇದ್ದು, ಕರಾವಳಿಯಲ್ಲಿ 40ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಪುತ್ತೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ – ಆರೋಪಿಗಳು ಶರಣಾಗದಿದ್ದಲ್ಲಿಆಸ್ತಿ ಮುಟ್ಟುಗೋಲು – Vishwanews24
