ನಂಜನಗೂಡಿನಲ್ಲಿ ಕೆಡವಲಾದ ದೇವಾಲಯದ ಮರು ನಿರ್ಮಾಣಕ್ಕೆ ಸರ್ಕಾರ ಚಿಂತನೆ : ನಳಿನ್‌ -Vishwanews24

Featured, ದಕ್ಷಿಣ ಕನ್ನಡ

ನಂಜನಗೂಡಿನಲ್ಲಿ ಕೆಡವಲಾದ ದೇವಾಲಯದ ಮರು ನಿರ್ಮಾಣಕ್ಕೆ ಸರ್ಕಾರ ಚಿಂತನೆ : ನಳಿನ್‌ -Vishwanews24

ಧಾರ್ಮಿಕ ಕ್ಷೇತ್ರಗಳು ಹಾಗೂ ಧರ್ಮದ ರಕ್ಷಣೆಗೆ ಬಿಜೆಪಿ ನೇತೃತ್ವದ ಸರ್ಕಾರ ಬದ್ಧ..

ಮೂಡುಬಿದಿರೆ : “ಧಾರ್ಮಿಕ ಕ್ಷೇತ್ರಗಳು ಹಾಗೂ ಧರ್ಮದ ರಕ್ಷಣೆಗೆ ಬಿಜೆಪಿ ನೇತೃತ್ವದ ಸರ್ಕಾರ ಬದ್ಧವಾಗಿದೆ” ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌‌ ತಿಳಿಸಿದ್ದಾರೆ.

ಮೂಡುಬಿದಿರೆಯಲ್ಲಿ ಮಾತನಾಡಿದ ಅವರು, “ಅಧಿಕಾರಿಗಳು ನಂಜನಗೂಡು ದೇವಾಲಯದ ತರವು ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟಿದ್ದಾರೆ. ನಂಜನಗೂಡಿನಲ್ಲಿ ಕೆಡವಲಾದ ದೇವಾಲಯದ ಮರು ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ” ಎಂದಿದ್ದಾರೆ.

“ಸುಪ್ರೀಂ ಕೋರ್ಟ್‌ ಆದೇಶ ಪಾಲನೆಯ ಸಲುವಾಗಿ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ. ಸಿಎಂ ಬಸವರಾಜ ಬೊ‌ಮ್ಮಾಯಿ ಅವರು ಈಗಾಗಲೇ ದೇವಾಲಯ ತೆರವು ವಿಚಾರಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಕೆಲ ಸೂಚನೆ ನೀಡಿದ್ದಾರೆ. ದೇವಾಲಯಗಳನ್ನು ಉಳಿಸಲು ಕಾನೂನು ಹೋರಾಟ ಕೈಗೊಳ್ಳುವ ಕುರಿತು ಪಕ್ಷದ ಸಭೆ ಹಾಗೂ ಶಾಸಕಂಗ ಸಭೆಯಲ್ಲಿ ನಿರ್ಧರಿಸಲಾಗುವುದು” ಎಂದು ತಿಳಿಸಿದ್ದಾರೆ.