ನಕಲಿ ಔಷಧಿಗಳ ಜಾಲ ನಿಯಂತ್ರಣಕ್ಕೆ ಕೇಂದ್ರ ಔಷಧ ನಿಯಂತ್ರಣ ಇಲಾಖೆ ಯಿಂದ ಮಹತ್ವದ ಮಾರ್ಗಸೂಚಿ ಪ್ರಕಟ -vishwanews24

Featured, ರಾಜ್ಯ ನ್ಯೂಸ್

ನಕಲಿ ಔಷಧಿಗಳ ಜಾಲ ನಿಯಂತ್ರಣಕ್ಕೆ ಕೇಂದ್ರ ಔಷಧ ನಿಯಂತ್ರಣ ಇಲಾಖೆ ಯಿಂದ ಮಹತ್ವದ ಮಾರ್ಗಸೂಚಿ ಪ್ರಕಟ

ಬೆಂಗಳೂರು : ನಕಲಿ ಔಷಧಿಗಳ ಜಾಲ ನಿಯಂತ್ರಣ ಮಾಡಲು ವೈದ್ಯರಿಗೆ, ಫಾರ್ಮಾಸಿಸ್ಟ್, ರಿಟೇಲರ್, ಡಿಸ್ಟ್ರಿಬ್ಯೂಟರ್, ಆಸ್ಪತ್ರೆ, ಹೆಲ್ತ್ಕೇರ್‌ಗಳು ಪೈನ್‌ಕಿಲ್ಲರ್, ಆಂಟಿಬಯೋಟಿಕ್, ಇತರೆ ಔಷಧಿ ಸರಬರಾಜು ಮಾಡುವಾಗ ಹಾಗೂ ಖರೀದಿ ಮಾಡುವಾಗ ಅನುಸರಿಸಬೇಕಾದ ಅಂಶಗಳ ಬಗ್ಗೆ ಕೇಂದ್ರ ಔಷಧ ನಿಯಂತ್ರಣ ಇಲಾಖೆ ಮಹತ್ವದ ಮಾರ್ಗಸೂಚಿ ಪ್ರಕಟಿಸಿದೆ.

ಫಾರ್ಮಾಸಿಸ್ಟ್, ರಿಟೇಲರ್, ಡಿಸ್ಟ್ರಿಬ್ಯೂಟರ್‌ಗಳು ಔಷಧಿ ಮಾರಾಟದ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಔಷಧಿಗಳನ್ನು Drugs Rules 1945 ಪ್ರಕಾರ ಡಾಕ್ಟರ್ ಚೀಟಿ ಇಲ್ಲದೆ ಮಾರುವಂತಿಲ್ಲ. ಫಾರ್ಮಾಸಿಸ್ಟ್ಗಳು ಜನರಿಗೆ ಸ್ವಯಂ ಚಿಕಿತ್ಸೆಗೆ ಆಂಟಿಬಯೋಟಿಕ್ ಅಥವಾ ನೋವು ಮಾತ್ರೆ ತೆಗೆದುಕೊಳ್ಳಲು ಪ್ರೋತ್ಸಾಹಿಸಬಾರದು. ಔಷಧಿ ಲೇಬಲ್ ಮೇಲಿನ ಎಚ್ಚರಿಕೆ ಮತ್ತು ಮಾರಾಟದ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ.

ಆಸ್ಪತ್ರೆ ಮತ್ತು ಹೆಲ್ತ್ಕೇರ್ ಸಂಸ್ಥೆಗಳು ನೋವು ನಿವಾರಕ ಮತ್ತು ಆಂಟಿಬಯೋಟಿಕ್‌ಗಳನ್ನು ವಿವೇಚನೆಯಿಂದ ಬಳಸುವ, ಮಾನಿಟರ್ ಮಾಡುವ ವ್ಯವಸ್ಥೆ ಮಾಡಬೇಕು. ಚೀಟಿ ಪರಿಶೀಲನೆ ಮತ್ತು ರೋಗಿಗಳಿಗೆ ಸರಿಯಾದ ಕೌನ್ಸೆಲಿಂಗ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ವೈದ್ಯರು ರೋಗಿಯ ವಯಸ್ಸು, ಬೇರೆ ಕಾಯಿಲೆ, ಅವರು ತೆಗೆದುಕೊಳ್ಳುತ್ತಿರುವ ಬೇರೆ ಮಾತ್ರೆ ನೋಡಿಕೊಂಡು, ಅವಶ್ಯಕತೆ ಇದ್ದರೆ ಮಾತ್ರ ನೋವುನಿವಾರಕ ಮತ್ತು ಆಂಟಿಬಯೋಟಿಕ್ ಬರೆಯಬೇಕು. ಬರೆಯುವಾಗ ಕಡಿಮೆ ಡೋಸ್‌ನಲ್ಲಿ, ಕಡಿಮೆ ದಿನಕ್ಕೆ ಮಾತ್ರ ಬರೆಯಬೇಕು, ಅದರಲ್ಲೂ ಕಿಡ್ನಿ ಸಮಸ್ಯೆ ಇರುವವರಿಗೆ ತುಂಬಾ ಎಚ್ಚರಿಕೆಯಿಂದಿರಬೇಕು. ಕಿಡ್ನಿ ಸಮಸ್ಯೆ, ನಿರ್ಜಲೀಕರಣ, ಹೃದಯ ಕಾಯಿಲೆ ಇರುವವರಿಗೆ ನೋವು ನಿವಾರಕ ಕೊಡುವಾಗ ಎಚ್ಚರಿಕೆ ವಹಿಸಬೇಕು. ಆಂಟಿಬಯೋಟಿಕ್ ಅನ್ನು ವಿವೇಚನೆಯಿಂದ ಬರೆಯಬೇಕು – ಯಾವ ಬ್ಯಾಕ್ಟೀರಿಯಾ, ಸೋಂಕು ಎಲ್ಲಿ, ಎಷ್ಟು ತೀವ್ರತೆ, ಲ್ಯಾಬ್ ರಿಪೋರ್ಟ್ ನೋಡಿ ಬರೆಯಬೇಕು. ಅನಗತ್ಯ ಕಾಂಬಿನೇಷನ್ ಮಾತ್ರೆ, ತಪ್ಪು ಆಂಟಿಬಯೋಟಿಕ್ ಆಯ್ಕೆ, ತಪ್ಪು ಡೋಸ್, ಅನಗತ್ಯವಾಗಿ ದೀರ್ಘಕಾಲ ಆಂಟಿಬಯೋಟಿಕ್ ಕೊಡುವುದನ್ನು ತಪ್ಪಿಸಬೇಕು ಎಂದು ಇಲಾಖೆ ತಿಳಿಸಿದೆ.

Leave a Reply