ಮಂಗಳೂರಿಗೆ ಆಗಮಿಸಿದ ನಟ ಸೋನುಸೂದ್ – Vishwanews24

Featured, ದಕ್ಷಿಣ ಕನ್ನಡ

ನಟ ಸೋನುಸೂದ್ ಮಂಗಳೂರಿನಲ್ಲಿ – Vishwanews24

ಮಂಗಳೂರು: ಖ್ಯಾತ ನಟ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸೋನು ಸೂದ್‌ ಅವರು ಮಂಗಳೂರಿಗೆ ಆಗಮಿಸಿದ್ದಾರೆ.

ಚಾರಿಟಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವುದಕ್ಕೆ ಬುಧವಾರ ಮಧ್ಯಾಹ್ನ ನಗರಕ್ಕೆ ಬಂದಿಳಿದಿದ್ದಾರೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪ್ರಜ್ಞಾ ಕೌನ್ಸೆಲಿಂಗ್ ಸೆಂಟರ್‌ ನಿರ್ದೇಶಕಿ ಡಾ. ಹಿಲ್ದಾ ರಾಯಪ್ಪನ್ ಸ್ವಾಗತಿಸಿದರು. ಸ್ಥಳೀಯ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಸಾಮಾಜಿಕ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಕೋವಿಡ್ ಸಂದರ್ಭದಲ್ಲಿ ದೇಶದ ಹಲವಾರು ಜನರಿಗೆ ನೆರವಾಗಿದ್ದು ತಮ್ಮ ಸಮಾಜ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೋವಿಡ್ ಸಂದರ್ಭ ಮಂಗಳೂರಿಗೂ ಸಹ ಆಮ್ಲಜನಕ ಸಿಲಿಂಡರ್ ಒದಗಿಸುವಲ್ಲಿ ಅವರು ಮುತುವರ್ಜಿ ವಹಿಸಿದ್ದರು.

ಮಂಗಳೂರಿನ ಪೊಲೀಸ್ ಗ್ರೌಂಡ್ ನಲ್ಲಿ ಪರೇಡ್ , ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಶೆಟ್ಟಿಗೆ ಕಮೀಷನರ್ ಕ್ಲಾಸ್ – Vishwanews24

Leave a Reply